ಅಳಿಲನ್ನು ಕಂಡರೆ ಇಷ್ಟಪಡದ ಜನರೇ ಬಹುಶಃ ಇಲ್ಲ. ಯಾಕೆಂದರೆ ಪುಟ್ಟದಾಗಿ ಹೆಜ್ಜೆ ಇಟ್ಟುಕೊಂಡು, ಡುಮ್ಮ ಕೆನ್ನೆಯ, ಎದ್ದು ನಿಂತ ಬಾಲದ ಈ ಪ್ರಾಣಿ ನಮ್ಮ ಮನೆಯ ಪುಟ್ಟಮಕ್ಕಳನ್ನು ಕೆಲವು ಬಾರಿ ಹೋಲುತ್ತದೆ.
ತಮ್ಮಿಷ್ಟದ ತಿಂಡಿಯನ್ನು ಮಕ್ಕಳು ಬಾಯಿಯಲ್ಲಿ ತುರುಕಿಕೊಂಡು ಗಬಗಬನೆ ತಿನ್ನುವಂತೆ ಅಳಿಲೊಂದು ತಿನ್ನುತ್ತಿರುವ ವಿಡಿಯೊವೊಂದು ಟ್ವಿಟರ್‍ನಲ್ಲಿ ವೈರಲ್ ಆಗಿದೆ. 60 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿ, ಐದು ಸಾವಿರಕ್ಕೂ ಹೆಚ್ಚು ಜನರಿಂದ ಲೈಕ್ ಪಡೆಯುತ್ತಿದೆ, ಕಮೆಂಟ್‍ಗಳ ಮಹಾಪೂರವೇ ಹರಿದುಬರುತ್ತಿದೆ.
ಅಫ್ಘಾನಿಸ್ಥಾನದಲ್ಲಿ ಶಿವಮೊಗ್ಗದ ಪಾದ್ರಿ ಅತಂತ್ರ, ‘ತಾಲಿಬಾನ್’ ಆತಂಕದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನ
ವಿಶೇಷವೆಂದರೆ ಅಳಿಲು ಡೈನಿಂಗ್ ಟೇಬಲ್ ಮೇಲೆ ಕೂತಿರುವಂತೆ ಕೃತಕವಾದ ಸಣ್ಣ ವೈನ್ ಬಾಟಲ್‍ಗಳು, ಬ್ರೆಡ್-ಬ್ಯಾಸ್ಕೆಟ್‍ಗಳನ್ನು ಟೇಬಲ್‍ವೊಂದರ ಮೇಲೆ ಇರಿಸಲಾಗಿದ್ದರೂ, ತನ್ನ ಎದುರಿನ ಪ್ಯಾನ್‍ನಲ್ಲಿರುವ ನಿಜವಾದ ನಟ್ಸ್ ಗಳನ್ನು ಮಾತ್ರವೇ ಕಂಡುಕೊಂಡ ಜಾಣ ಅಳಿಲು ಗಬಗಬನೆ ಬಾಯಿಗೆ ಹಾಕಿಕೊಳ್ಳುತ್ತಿದೆ.
ಒಳ್ಳೆಯ ಕಾಲ (ಗುಡ್ ಟೈಮ್ಸ್) ಎಂದು ಈ ವಿಡಿಯೊಗೆ ಅಡಿಬರಹ ನೀಡಲಾಗಿದ್ದು, ಕೊರೊನಾ ಕಾಲಘಟ್ಟದಲ್ಲಿ ಮನಸ್ಸಿಗೆ ಮುದನೀಡುವ ಸಮಯವೇ ಸರಿ ಇದು ಎಂದು ಟ್ವೀಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
https://twitter.com/buitengebieden_/status/1427715430442016772?ref_src=twsrc%5Etfw%7Ctwcamp%5Etweetembed%7Ctwterm%5E1427715430442016772%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fviral-video-of-squirrel-feasting-on-nuts-is-the-cutest-thing-on-internet-today-4100174.html
https://twitter.com/hopkinsBRFC21/status/1407008989473345536?ref_src=twsrc%5Etfw%7Ctwcamp%5Etweetembed%7Ctwterm%5E1407008989473345536%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fviral-video-of-squirrel-feasting-on-nuts-is-the-cutest-thing-on-internet-today-4100174.html