
ಜನರ ಹುಚ್ಚಾಟಗಳು, ಕ್ರಿಯಾಶೀಲ ಚಿಂತನೆಗಳಿಗೆ ಮಿತಿಯೇ ಇಲ್ಲ. ಅವರು ಹಣ್ಣನ್ನು ಮಣ್ಣಾಗಿಸಬಲ್ಲರು, ಅದೇ ಮಣ್ಣನ್ನು ಹಣ್ಣಿನಂತೆ ಪುನಃ ಒಟ್ಟುಗೂಡಿಸಿ ಬಣ್ಣ ಬಳಿದು ಆಪ್ತರನ್ನು ಮರುಳು ಮಾಡಬಲ್ಲರು. ಅಂತಹದ್ದೇ ಒಂದು ತಲೆಹರಟೆ ವಿಡಿಯೊ ಇನ್ಸ್ಟಾಗ್ರಾಮ್ನಲ್ಲಿ ಭಾರಿ ವೈರಲ್ ಆಗಿದೆ.
ಹೆಬ್ಬಾವುಗಳಲ್ಲೇ ಬಹಳ ಆಕರ್ಷಕವಾದದ್ದು ಹಳದಿ ಬಣ್ಣದ ಪಟ್ಟಿಗಳುಳ್ಳ ಬಿಳಿಯಾದ ಹಾವು. ಇದು ಬಹಳ ಅಪರೂಪದ ಕೂಡ ಹೌದು. ಇಂಥ ಹಾವುಗಳನ್ನು ಇರಿಸಲಾಗಿರುವ ಮೃಗಾಲಯಗಳಿಗೆ ಜನರು ಮುತ್ತಿಗೆ ಹಾಕಿ, ಹಾವನ್ನು ಅಚ್ಚರಿಯಿಂದ ನೋಡುತ್ತಾರೆ. ಅದು ಕೂಡ ಹೆಬ್ಬಾವು ತನ್ನನ್ನು ಸುತ್ತಿಕೊಂಡು ಮುಖ ಕೆಳಗೆ ಮಾಡಿಕೊಂಡು ನಿಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದರೆ ಮೈ ‘ಜುಮ್ಮೆ’ನಿಸಿಬಿಡುತ್ತದೆ.
ಬೀಗ ಒಡೆದು ಮನೆಯೊಳಗೆ ಹೋದ ಪತಿಗೆ ಬಿಗ್ ಶಾಕ್
ಇಂಥದ್ದೇ ಪೋಸ್ನಲ್ಲಿ ಕುಳಿತ ಹೆಬ್ಬಾವನ್ನು ಚಾಕುವಿನಿಂದ ಕತ್ತರಿಸುವ ವಿಡಿಯೊ ವೈರಲ್ ಆಗಿದೆ ! ನಿಜವಾದ ಹಾವು ಅಲ್ಲ, ಕೇಕ್ನಲ್ಲಿ ಮಾಡಿದ ಹಾವು !
ಹೌದು, ಹೌದು, ಖಂಡಿತ ಹೌದು…
ಸ್ನೇಕ್ ಕೇಕ್ ಎಂಬ ಹೆಸರಿನಲ್ಲಿ ನಟಾಲೀ ಎಂಬಾಕೆ ಇದನ್ನು ತಯಾರಿಸಿದ್ದಾಳೆ. ‘ sideserfcakes ‘ ಖಾತೆಯಲ್ಲಿ ವಿಡಿಯೊ ಲಭ್ಯವಿದ್ದು, ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
ಹಾವಿನಂತೆಯೇ ಸ್ಪೈಡರ್ ಕೇಕ್, ಝಿಪ್ಲಾಕ್ ಬ್ಯಾಗ್ ಕೇಕ್, ಬಾಚಣಿಗೆಯ ಆಕೃತಿಯ ಕೇಕ್ಗಳ ವಿಶಿಷ್ಟ ವಿಡಿಯೊಗಳನ್ನು ಈ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಒಂದೊಂದು ಕೂಡ ನಿಬ್ಬೆರಗಾಗಿಸುತ್ತವೆ.
https://youtu.be/Mg6E3x_xA6Q