
ನಡುರಸ್ತೆಯಲ್ಲೇ ಇಬ್ಬರು ವಿದ್ಯಾರ್ಥಿನಿಯರು ಜುಟ್ಟು ಹಿಡಿದುಕೊಂಡು ಜಗಳವಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಹಿಂಸಾಚಾರದ ನಡುವೆ ಶಾಲೆಗೆ ಹೋಗುವ ಹುಡುಗಿಯರ ಕಿತ್ತಾಟ ಕಳವಳವನ್ನುಂಟುಮಾಡಿದೆ.
ಮನೆ ಮಾಳಿಗೆಯಿಂದ ಹೊಡೆದಾಟದ ವೀಡಿಯೋವನ್ನು ಸೆರೆಹಿಡಿಯಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ದೃಶ್ಯಾವಳಿಗಳಲ್ಲಿ ಶಾಲಾ ವಿದ್ಯಾರ್ಥಿನಿಯರು ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಕಪಾಳಮೋಕ್ಷ ಮಾಡುವುದನ್ನು ಮತ್ತು ಪರಸ್ಪರ ಕೂದಲು ಹಿಡಿದುಕೊಂಡು ಎಳೆದಾಡುವುದನ್ನು ಕಾಣಬಹುದು. ಗಲಾಟೆ ವೇಳೆ ವಿದ್ಯಾರ್ಥಿನಿಯರ ಸ್ನೇಹಿತರು ಮಧ್ಯಪ್ರವೇಶಿಸಿ ಜಗಳ ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ.
ವೈರಲ್ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ವಿದ್ಯಾರ್ಥಿಗಳಲ್ಲಿ ಇಂತಹ ನಡವಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿದ್ದರೆ ಇತರರು ಇದನ್ನು ಭಾರತದಲ್ಲಿ ಸಾಮಾನ್ಯ ಘಟನೆ ಎಂದಿದ್ದಾರೆ.