ಮನುಷ್ಯರಂತೆ, ಪ್ರಾಣಿಗಳು ಕೂಡ ಹೊಸ ಮತ್ತು ಅಸಾಮಾನ್ಯವಾದುದನ್ನು ನೋಡಿದರೆ ಅವುಗಳಿಗೆ ವಿನೋದ ಮತ್ತು ಕುತೂಹಲ ಮೂಡುತ್ವೆ. ಅಂತಹ ಒಂದು ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪಾರ್ಕ್ ನಲ್ಲಿ ಮಕ್ಕಳು ಆಟವಾಡುವ ರಿಮೋಟ್ ಕಂಟ್ರೋಲ್ಡ್ ಕಾರಿನ ಹಿಂದೆ ನಾಯಿಗಳು ಓಡುತ್ತಿರುವ ವಿಡಿಯೋ ನೋಡಿದರೆ ನಿಮ್ಮ ಮನಸ್ಸು ಮುದಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಹ್ಯೂಮರ್ ಅಂಡ್ ಅನಿಮಲ್ಸ್ ಹೆಸರಿನ ಟ್ವಿಟ್ಟರ್ ಪೇಜ್ ಈ ವಿಡಿಯೋವನ್ನು ಹಂಚಿಕೊಂಡಿದೆ. “ನೀವು ರಿಮೋಟ್ ಕಂಟ್ರೋಲ್ಡ್ ಕಾರನ್ನು ಡಾಗ್ ಪಾರ್ಕ್‌ಗೆ ತಂದಾಗ ಹೀಗಾಗುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಈ ವೈರಲ್ ವಿಡಿಯೋದಲ್ಲಿ, ಸುಮಾರು 20 ನಾಯಿಗಳು ಕಾರನ್ನು ಬೆನ್ನಟ್ಟುತ್ತಿರುವುದನ್ನು ನೋಡಬಹುದು. ಆದರೆ ಅದರ ವೇಗವು ನಾಯಿಗಳಿಗಿಂತ ಹೆಚ್ಚು ಇರುವುದರಿಂದ ಕಾರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಪಟ್ಟು ಬಿಡದ ನಾಯಿಗಳು ಕಾರಿನ ಹಿಂದೆ ಓಡುತ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು ನಗೆಬೀರಿದ್ದಾರೆ.
https://twitter.com/i/status/1439220327767322627