
ತಮ್ಮ ಮನೆಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ದಾಳಿ ಮಾಡ್ತಿದ್ದಾರೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ವ್ಯಕ್ತಿ ಹಾವಿನಂತೆ ತೆವಳುತ್ತಾ ಛಾವಣಿ ಏರಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಅಧಿಕಾರಿಗಳು ಈತನ ಮನೆಯನ್ನ ತಲುಪಿದ್ದರು. ಕೂಡಲೇ ಬಾಲ್ಕನಿಯತ್ತ ಧಾವಿಸಿದ ಅಧಿಕಾರಿಗಳು ಈ ವಿಡಿಯೋವನ್ನ ಚಿತ್ರಿಕರಿಸಿದ್ದಾರೆ. ಆದರೆ ಇನ್ನೇನು ಆತ ವಿದ್ಯುತ್ ಸಂಪರ್ಕ ಕಡಿತ ಮಾಡಬೇಕು ಅನ್ನೋವಷ್ಟರಲ್ಲಿ ಅಧಿಕಾರಿಗಳು ಈತನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮುರಾದ್ನಗರ ಉಪ ವಿಭಾಗಾಧಿಕಾರಿ ಕಚೇರಿಯ ಅಧಿಕಾರಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನ ನಮ್ಮ ವ್ಯಾಪ್ತಿಗೆ ಸೇರಿದ ಮನೆಯೊಂದರಲ್ಲಿ ನಡೆದ ಘಟನೆಯಾಗಿದೆ. ಕಳೆದ 15 ದಿನಗಳು ವಿದ್ಯುತ್ಚ್ಛಕ್ತಿ ಪ್ರಸರಣಾ ಇಲಾಖೆ ಸವಾಲಿನ ದಿನವಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಅಕ್ರಮ ವಿದ್ಯುತ್ ಸಂಪರ್ಕ ಹೊಂದಿದ್ದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮುರಾದ್ನಗರದಲ್ಲಿ ದಾಳಿ ನಡೆಸಿದ ವೇಳೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ರು.