ಈಗ ಎಲ್ಲರ ಬಳಿ ಸ್ಮಾರ್ಟ್ ಫೋನ್ ಇದೆ. ಹಾಗೆ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸ್ ಅಪ್ ಅಂತ ಅಕೌಂಟ್ ಹೊಂದಿದ್ದಾರೆ. ಅವರ ಮುಂದೆ ಏನೇ ನಡೀಲಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಕೆಲ ವಿಡಿಯೋಗಳು ರಾತ್ರೋರಾತ್ರಿ ವೈರಲ್ ಆಗುತ್ವೆ. ಆ ವ್ಯಕ್ತಿಗಳು ಪ್ರಸಿದ್ಧಿಗೆ ಬರ್ತಾರೆ. ಈಗ ಕಡಲೆಕಾಯಿ ಮಾರಾಟ ಮಾಡುವ ಮಹಿಳೆಯೊಬ್ಬಳ ವಿಡಿಯೋ ವೈರಲ್ ಆಗಿದೆ.
ಬಸ್ ನಿಲ್ದಾಣದಲ್ಲಿ ಕಡಲೆಕಾಯಿ ಮಾರಾಟ ಮಾಡುವ ಮಹಿಳೆ ಒಂದೇ ಸಮನೆ ಕಿರುಚುತ್ತಾ ನೀವು ಪ್ರಗತಿಯ ಧ್ವಜವನ್ನು ಹಾರಿಸಲು ಮತ್ತು ನಿಮ್ಮ ಸ್ಥಾನಮಾನವನ್ನು ತೋರಿಸಲು ಬಯಸಿದರೆ, ನಿಮ್ಮ ರಕ್ತನಾಳಗಳಲ್ಲಿ ಉತ್ಸಾಹವನ್ನು ತುಂಬುವ ಛತ್ತೀಸ್‌ಗಢಿ ಕಡಲೆಕಾಯಿ ತಿನ್ನಿರಿ. ಕಡಲೆಕಾಯಿ ತಿನ್ನಿ ಯಾರು ಬೇಡ ಅಂದ್ರು ಅಂತ ವಿಡಿಯೋದಲ್ಲಿ ಹೇಳ್ತಿದ್ದು, ಇದು ವೈರಲ್ ಆಗಿದೆ.
@coolfunnytshirt ಹೆಸರಿನ ಖಾತೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವರು ಲೈಕ್ ಮಾಡಿದ್ದಾರೆ. ಈಕೆ ಕಡಲೆಕಾಯಿ ಮಾರಾಟ ಮಾಡ್ತಿದ್ದಾಳಾ ಇಲ್ಲ ಬೆದರಿಸುತ್ತಿದ್ದಾಳಾ ಎಂದು ಕೆಲವರು ಪ್ರಶ್ನೆ ಕೇಳಿದ್ದಾರೆ. ಬಿಗ್ ಬಾಸ್ ನಲ್ಲಿ ಇಂಥ ಕೂಗುವ ವ್ಯಕ್ತಿ ಬೇಕು. ಅಲ್ಲಿಗೆ ಹೋಗಿ ಎಂದು ಇನ್ನೊಬ್ಬರು ಹೇಳಿದ್ದಾರೆ.