ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಜಲಾಲ್ಪುರದಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಪುಸ್ತಕಗಳನ್ನು ಹಿಡಿದು ಗುಡಿಸಲಿನಿಂದ ಓಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.
ಬುಲ್ಡೋಜರ್ ಬಳಿ ಬರುತ್ತಿದ್ದಂತೆ ಆ ಬಾಲಕಿ ಓಡಿ ಹೋಗುತ್ತಿರುವುದು ಕಂಡುಬಂದಿದೆ. ಈ ಘಟನೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, “ಉತ್ತರ ಪ್ರದೇಶದ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದಕ್ಕೆ ಇದು ಸಾಕ್ಷಿ” ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಕೂಡ ಈ ವಿಡಿಯೋವನ್ನು ಹಂಚಿಕೊಂಡು, “ಮಕ್ಕಳ ಕೈಯಿಂದ ಪುಸ್ತಕಗಳನ್ನು ಮತ್ತು ಅವರ ತಲೆ ಮೇಲಿನ ಸೂರನ್ನು ಕಸಿದುಕೊಳ್ಳುವ ಅಧಿಕಾರದಲ್ಲಿರುವವರಿಗೆ ಈ ವಿಡಿಯೋ ನಾಚಿಕೆಗೇಡಿನ ಸಂಗತಿ” ಎಂದು ಹೇಳಿದೆ.
ಆದರೆ, ಅಂಬೇಡ್ಕರ್ ನಗರ ಪೊಲೀಸರು ಈ ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಜಲಾಲ್ಪುರ ತಹಶೀಲ್ದಾರ್ ನ್ಯಾಯಾಲಯದ ಆದೇಶದ ನಂತರ ಗ್ರಾಮದ ಭೂಮಿಯಿಂದ ಒತ್ತುವರಿ ತೆರವು ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ವಸತಿ ರಹಿತ ರಚನೆಗಳನ್ನು ತೆರವುಗೊಳಿಸುವ ಮೊದಲು ಹಲವು ನೋಟಿಸ್‌ಗಳನ್ನು ನೀಡಲಾಗಿತ್ತು. ಸರ್ಕಾರಿ ಭೂಮಿಯನ್ನು ಮರಳಿ ಪಡೆಯಲು ಕಂದಾಯ ನ್ಯಾಯಾಲಯದ ಆದೇಶದಂತೆ ತೆರವು ಕಾರ್ಯ ನಡೆಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಜಿಲ್ಲಾಡಳಿತವು ಹಲವು ತಿಂಗಳುಗಳಿಂದ ಒತ್ತುವರಿ ಸಮಸ್ಯೆಯನ್ನು ಪರಿಹರಿಸುತ್ತಿದ್ದು, ಕಂದಾಯ ನ್ಯಾಯಾಲಯದ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#उत्तरप्रदेश _बुल्डोजर 👇
आज जलालपुर अंबेडकर नगर।
10 सेकेंड का यह वीडियो हर किसी का दिल झकझोर देगा
योगी बाबा के बुल्डोजर के सामने —- छ वर्षीय छात्रा अपने कापी और किताब बचाती कैसे दिखी देखिए वीडियो
अंबेडकर नगर प्रशासन उप जिलाधिकारी के नेतृत्व में पुलिस बल के साथ अतिक्रमण… pic.twitter.com/3bjH7hsNNU
— Brijesh singh yadav (@Brijesh77956738) March 21, 2025