
ಖಾಸಗಿ ಸ್ಥಳವಾಗಿರಲಿ ಅಥವಾ ಹೌಸ್ ಪಾರ್ಟಿಯಾಗಿರಲಿ, ಪ್ರೀತಿಯ ವಿಷಯ ಬಂದಾಗ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಅದರಲ್ಲಿಯೂ ನೃತ್ಯದ ವಿಷಯ ಬಂದಾಗ ಎಲ್ಲವನ್ನೂ ಮರೆತು ವಯಸ್ಸಿನ ಹಂಗನ್ನೂ ತೊರೆದು ನೃತ್ಯ ಮಾಡುವುದು ಇದೆ.
ತಮ್ಮ ವಯಸ್ಸನ್ನು ಮರೆತ ವೃದ್ಧರು ಅದ್ಭುತವಾಗಿ ಸ್ಟೆಪ್ ಹಾಕಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ. ನೃತ್ಯಕ್ಕೆ ವಯಸ್ಸಿನ ಹಂಗು ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವೃದ್ಧ ದಂಪತಿಗಳು ಲತಾ ಮಂಗೇಶ್ಕರ್ ಅವರ ರೊಮ್ಯಾಂಟಿಕ್ ಹಿಟ್ ‘ಆ ಜಾನೇ ಜಾನ್’ ಗಾಯನಕ್ಕೆ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ಸುಂದರವಾದ ಹಾಡಿಗೆ ಸ್ಟೆಪ್ ಹಾಕುತ್ತಿರುವಾಗಿ ಅವರು ಪರಸ್ಪರ ಎಷ್ಟು ರೊಮಾಂಟಿಕ್ ಆಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ.
ಕಪ್ಪು ವಸ್ತ್ರವನ್ನು ಧರಿಸಿರುವ ಪತಿ ಹಾಗೂ ಸೀರೆಯಲ್ಲಿರುವ ಪತ್ನಿ ರೋಮಾಂಟಿಕ್ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇದು ಆನ್‌ಲೈನ್ ಬಳಕೆದಾರರ ಹೃದಯವನ್ನು ಕದ್ದಿದೆ. ಆಕರ್ಷಕ ದಂಪತಿಗಳು ಎಂಬ ಶೀರ್ಷಿಕೆ ಜತೆ ಇದು ವೈರಲ್ ಆಗುತ್ತಿದೆ.