ಮದುವೆಯಾದ ಹೊಸತರಲ್ಲಿ ಇರೋ ಪ್ರೀತಿ ಬರುಬರುತ್ತಾ ಇರುವುದಿಲ್ಲ ಅನ್ನೋ ಮಾತೊಂದಿದೆ. ಆದರೆ, ಮತ್ತೆ ವಯಸ್ಸಾದ ಬಳಿಕ ಪ್ರೀತಿ ಮೊಳಕೆಯೊಡೆಯುತ್ತದೆ. ದಂಪತಿಗಳಿಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಇದೀಗ ವೃದ್ಧ ದಂಪತಿ ಒಟ್ಟಿಗೆ ರಸ್ತೆ ದಾಟುತ್ತಿರುವ ಸುಂದರವಾದ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ಮಳೆಯ ನಡುವೆ ವೃದ್ಧ ದಂಪತಿ ಒಟ್ಟಿಗೆ ನಡೆದಾಡುವ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಛಾಯಾಗ್ರಾಹಕ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಸಿಫ್ ಖಾನ್ ಅವರು ವಿಡಿಯೋವನ್ನು ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊ 26 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಮಳೆಗಾಲದ ದಿನ ವೃದ್ಧ ದಂಪತಿ ಒಟ್ಟಿಗೆ ರಸ್ತೆ ದಾಟುತ್ತಿರುವ ದೃಶ್ಯವಿದೆ. ವಯಸ್ಸಾದ ವ್ಯಕ್ತಿ ತನ್ನ ಹೆಂಡತಿಗೆ ಕೊಡೆ ಹಿಡಿದಿರುವುದನ್ನು ನೋಡಬಹುದು. ಆಕೆ ಕೈಯಲ್ಲಿ ಬ್ಯಾಗ್ ಅನ್ನು ಹಿಡಿದು ಪತಿ ಜೊತೆ ಹೆಜ್ಜೆ ಹಾಕಿದ್ದಾರೆ. ನೋಡಲು ಎಷ್ಟು ಸೊಗಸಾಗಿದೆ ಎನ್ನುತ್ತಾ ನೆಟ್ಟಿಗರು ವಿಡಿಯೋಗೆ ಪ್ರೀತಿಯ ಮಳೆ ಸುರಿಸಿದ್ದಾರೆ.