
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲ ವಿಡಿಯೋಗಳು ಮನಸ್ಸಿಗೆ ಇಷ್ಟವಾಗುತ್ತವೆ. ಒಂದು ವಿಡಿಯೋ ಇಡೀ ದಿನ ಉಲ್ಲಾಸದಿಂದಿರುವಂತೆ ಮಾಡುತ್ತದೆ. ಈಗ ವೈರಲ್ ಆಗಿರುವ ವಿಡಿಯೋ ಒಂದು ದಿನ ಮಾತ್ರವಲ್ಲ ಒಂದು ವಾರಕ್ಕೆ ಸಾಕಾಗುವಷ್ಟು ಖುಷಿ ನೀಡಬಲ್ಲದು.
ಸಾಮಾನ್ಯವಾಗಿ ಭಾನುವಾರ ಕಳೆದು ಸೋಮವಾರ ಬರ್ತಿದ್ದಂತೆ ಜನರ ಮೂಡ್ ಬದಲಾಗುತ್ತದೆ. ಕೆಲಸದ ಒತ್ತಡ ಶುರುವಾಗುತ್ತದೆ. ಅಂತವರು ಈ ವಿಡಿಯೋ ನೋಡಿ ಮನಸ್ಪೂರ್ತಿ ನಗಬಹುದು. ಐಪಿಎಸ್ ಅಧಿಕಾರಿ ದೀಪನ್ಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಗುವಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಕೇವಲ 30 ಸೆಕೆಂಡುಗಳ ವಿಡಿಯೋ ಆಗಿದ್ದು, ವೀಡಿಯೊದಲ್ಲಿ ಮಗುವಿನ ತಂದೆ ಮಗುವಿಗೆ ಆಹಾರ ತಿನ್ನಿಸುತ್ತಿದ್ದಾನೆ. ಈ ವೇಳೆ ಮಗು ನಗಲು ಶುರು ಮಾಡುತ್ತದೆ. ಮಗುವಿನ ನಗು ಎಲ್ಲರ ಗಮನ ಸೆಳೆದಿದೆ.
1 ಗಂಟೆಯೊಳಗೆ ಸುಮಾರು 2 ಸಾವಿರ ಬಾರಿ ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅನೇಕರು ಪದೇ ಪದೇ ಈ ವಿಡಿಯೋ ನೋಡಿ ಖುಷಿಪಡುತ್ತಿದ್ದಾರೆ. ಮಗುವಿನ ನಗು ಎಲ್ಲ ನೋವನ್ನು ಮರೆಸುವಂತಿದೆ. ನೀವೂ ಈ ವಿಡಿಯೋ ನೋಡಿ ಎಂಜಾಯ್ ಮಾಡಿ.