alex Certify ಮಾವನ ಮನೆ ಮುಂದೆ ನವ ವಧುವಿನ ಸಖತ್ ಡಾನ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾವನ ಮನೆ ಮುಂದೆ ನವ ವಧುವಿನ ಸಖತ್ ಡಾನ್ಸ್….!

ಭಾರತೀಯ ಮದುವೆಗಳೆಂದರೆ ಅಲ್ಲಿ ಮನೋರಂಜನೆಗೆ ಕೊರತೆಯೇ ಇರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಮೋಜು, ಮಸ್ತಿ, ನೃತ್ಯ ಎಲ್ಲವೂ ಸಮ್ಮಿಳಿತಗೊಂಡು ಮದುವೆ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ.

ಇಲ್ಲೊಂದು ಮದುವೆ ಸಂಭ್ರಮದ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಮಧುಮಗಳು ಮಾಡಿದ ಯೋಗ ಮತ್ತು ನೃತ್ಯಕ್ಕೆ ನೆಟ್ಟಿಗರು ಶಹಬ್ಬಾಸ್ ಎಂದು ಹೇಳಿದ್ದಾರಲ್ಲದೇ, ಯೋಗಗುರು ಬಾಬಾ ರಾಮ್ ದೇವ್ ಅವರೇ ಈ ವಧುವಿನಿಂದ ಯೋಗ ಕಲೆಗಳನ್ನು ಹೇಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ !

ತಾಳಿ ಕಟ್ಟಿದ ನಂತರ ವಧುವನ್ನು ಗಂಡನ ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮವದು. ಮನೆ ಪ್ರವೇಶ ಮಾಡುವ ಮುನ್ನ ಮನೆ ಎದುರು ಗ್ರಾಮಸ್ಥರೆಲ್ಲಾ ಸೇರಿದ್ದಾರೆ. ಅಲ್ಲಿ ವಧುವಿಗೆ ಡ್ಯಾನ್ಸ್ ಮಾಡುವಂತೆ ಹೇಳಲಾಗುತ್ತದೆ.

ಖಾತೆಗೆ 2 ಸಾವಿರ ರೂ. ಜಮಾ: ರೈತರಿಗೆ ಕೇಂದ್ರದಿಂದ ಮತ್ತೊಮ್ಮೆ ಗುಡ್ ನ್ಯೂಸ್

ತಾಳಿಯನ್ನು ಹಲ್ಲಿನಲ್ಲಿ ಕಚ್ಚುತ್ತಾ ಡ್ಯಾನ್ಸ್ ಮಾಡಬೇಕಾಗಿರುವುದು ಅಲ್ಲಿನ ಸಂಪ್ರದಾಯವಂತೆ. ಅದರಂತೆ ಆಕೆ ಡ್ಯಾನ್ಸ್ ಮಾಡುತ್ತಲೇ ಅತ್ಯಂತ ಕಠಿಣವೆನಿಸುವ ಬ್ರಿಡ್ಜ್ ಪೋಸ್ ನ ಯೋಗವನ್ನೂ ಪ್ರದರ್ಶಿಸಿದಳು. ಆಕೆ ಅತ್ಯಂತ ಸರಳವಾಗಿ ಈ ಕಠಿಣ ಯೋಗವನ್ನು ಪ್ರದರ್ಶಿಸಿರುವುದನ್ನು ಕಂಡ ನೆಟ್ಟಿಗರು, ಯೋಗಗುರು ಬಾಬಾ ರಾಮ್ ದೇವ್, ಈಕೆಯಿಂದ ಯೋಗದ ಕಲೆಗಳನ್ನು ಕಲಿಯಬೇಕೆಂದು ಸಲಹೆ ನೀಡಿದ್ದಾರೆ.

ಅನೇಕ ನೆಟ್ಟಿಗರು, ಈ ವಧು ಹಾರರ್ ಚಿತ್ರ ಎಕ್ಸಾರ್ಸಿಸ್ಟ್ ನ ನಟಿ ಇರಬೇಕೆಂದು ಜೋಕ್ ಮಾಡಿದ್ದರೆ, ಇನ್ನೂ ಕೆಲವರು ಈಕೆಯ ಕೌಶಲ್ಯಕ್ಕೆ ತಾರೀಫ್ ಮಾಡಿದ್ದಾರೆ. ಅಂದ ಹಾಗೆ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋವನ್ನು 13.9 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...