ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ಸಹೋದರಿಯ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೆಹ್ರಾಡೂನ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಲವಾರು ಕ್ರಿಕೆಟಿಗರು ಭಾಗವಹಿಸಿದ್ದರು.
ಧೋನಿ ಮತ್ತು ಪಂತ್ ಅವರು ಬಾಲಿವುಡ್‌ನ ಜನಪ್ರಿಯ ಹಾಡು ‘ತು ಜಾನೆ ನಾ’ ಹಾಡಿದ್ದು, ಅವರ ಗಾಯನಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಈ ವಿಡಿಯೋದಲ್ಲಿ ಧೋನಿ ಅವರ ಪತ್ನಿ ಸಾಕ್ಷಿ ಕೂಡ ಇದ್ದಾರೆ.
ರಿಷಬ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ಅವರು ಅಂಕಿತ್ ಚೌಧರಿ ಎಂಬ ಉದ್ಯಮಿಯನ್ನು ವಿವಾಹವಾಗುತ್ತಿದ್ದು, ಈ ಸಂಬಂಧದ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಜೋಡಿ 2024 ರಲ್ಲಿ ಲಂಡನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ಈ ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ಮತ್ತು ಪಂತ್ ಅವರ ಬಾಂಧವ್ಯವನ್ನು ಶ್ಲಾಘಿಸಿದ್ದಾರೆ.
Rishabh Pant singing performance 🤣❤️ pic.twitter.com/BuT9IgJXXZ
— Sandy (@flamboypant) March 12, 2025