ಹಾವುಗಳೆಂಬ ಸರಿಸೃಪಗಳ ಜಾತಿಯ ಪ್ರಾಣಿಗಳನ್ನು ಕಂಡರೆ ಯಾರಿಗೆ ಭಯವಿಲ್ಲ. ಯಾವುದೇ ಜಾತಿಯ ಹಾವಾದರೂ ಸರಿಯೇ , ಅದರ ಗಾತ್ರವು ಎಷ್ಟಿದ್ದರೂ ಸರಿಯೇ ನೋಡಿದ ಕೂಡಲೇ ಒಂದು ಕ್ಷಣ ಎದೆ ‘ಝಲ್’ ಎನ್ನುತ್ತದೆ. ಬಹಳಷ್ಟು ಜನರು ಹಾವನ್ನು ಕಂಡಕೂಡಲೇ ಗಾಬರಿಗೊಂಡು ಓಡಿಹೋಗುತ್ತಾರೆ. ಅವರ ಬೆನ್ನಟ್ಟುವ ಹಾವುಗಳನ್ನು, ಯಾರೋ ಧೈರ್ಯಶಾಲಿಗಳು ಬಡಿದು ಓಡಿಸುತ್ತಾರೆ. ಇಲ್ಲವೇ ಕೊಂದುಹಾಕುತ್ತಾರೆ.
ಆದರೆ, ಹಾವೊಂದು ಆಹಾರಕ್ಕಾಗಿ ಹುಡುಕಾಡುತ್ತ ಕೋಳಿಯ ವಾಸಸ್ಥಳಕ್ಕೆ ನುಗ್ಗಿದೆ. ಆಗ ತಾನೇ ಮೊಟ್ಟೆ ಇಟ್ಟು, ಮರಿಗಳಿಗೆ ಕಾವು ಕೊಡುತ್ತಿರುವ ಕೋಳಿಯು ಹಾವಿನ ಪ್ರವೇಶದಿಂದ ಕ್ಷಣಕಾಲ ದಂಗಾಗಿದೆ. ಬಳಿಕ ಚೇತರಿಸಿಕೊಂಡು, ಮರಿಗಳ ರಕ್ಷ ಣೆಗೆ ಮುಂದಾಗಿದೆ. ಹೆಡೆ ಎತ್ತಿಕೊಂಡು ಕೋಳಿಯನ್ನು ಓಡಿಸಲು ಮುಂದಾದ ಹಾವಿಗೆ ಕೋಳಿಯು ತಕ್ಕಮಟ್ಟದಲ್ಲೇ ಹೊಡೆತ ಕೊಡಲು ಸಿದ್ಧವಾಗಿದೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಹಾವು-ಕೋಳಿಯ ನಡುವಿನ ಹೋರಾಟ ಸಾಕಷ್ಟು ವೈರಲ್ ಆಗಿದೆ.
ಹಾರುತ್ತಲೇ ಕುಕ್ಕುವ ಕೋಳಿಯ ಆರ್ಭಟಕ್ಕೆ ಹೆದರಿದ ಹಾವು ಸ್ಥಳದಿಂದ ಓಡಿದೆ. ಮರಿಗಳ ರಕ್ಷ ಣೆ ಮಾಡಿದ ನೆಮ್ಮದಿಯಿಂದ ಕೋಳಿಯು ಸುತ್ತಲೂ ಕಣ್ಣಾಡಿಸಿ, ಮತ್ತೆ ಬೇರೆ ಯಾವುದಾದರೂ ವೈರಿಗಳು ಇದ್ದಾರೆಯೇ ಎಂದು ಕೂಡ ಗಮನ ಹರಿಸಿದೆ.
https://youtu.be/hB1NR1QBljQ