
ಖಜಾನೆ ಸದಾ ತುಂಬಿರಬೇಕೆಂದ್ರೆ ಈ ʼಉಪಾಯʼ ಅನುಸರಿಸಿ……
ಹೆಣ್ಣಾನೆ ಮರಿಯೊಂದು ತನ್ನ ಮರಿಯನ್ನು ರಕ್ಷಿಸಲು ಮೊಸಳೆಯನ್ನು ಕೊಲ್ಲುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾಂಬಿಯಾದಲ್ಲಿ ಸಫಾರಿಯಲ್ಲಿದ್ದ ವೇಳೆ, ಹನ್ಸ್ ಹೆನ್ರಿಕ್ ಹಾಹರ್ ಎಂಬುವವರು ಈ ಘಟನೆಯನ್ನು ಚಿತ್ರೀಕರಿಸಿದ್ದಾರೆ.
ಮೊಸಳೆಗಳು ಮರಿ ಆನೆಗಳನ್ನು ಬೇಟೆಯಾಡುತ್ತವೆ. ಹಾಗೆಯೇ ಮರಿಯಾನೆಯನ್ನು ಬೇಟೆಯಾಡಲು ಮುಂದಾದ ಮೊಸಳೆಗೆ ತಾಯಿ ಆನೆ ಚೆನ್ನಾಗಿ ತಿವಿದಿದೆ. ತನ್ನ ಮರಿಯನ್ನು ರಕ್ಷಿಸಲು ಮೊಸಳೆಯ ಮೇಲೆ ತಾಯಿ ಆನೆ ಆಕ್ರಮಣಕಾರಿ ವರ್ತನೆ ತೋರುತ್ತದೆ. ಅಲ್ಲದೆ ತನ್ನ ಕಾಲಿನಿಂದ ಮೊಸಳೆಯನ್ನು ಬಲವಾಗಿ ತುಳಿದಿದೆ. ನಿರಂತರವಾಗಿ ಆನೆ ತುಳಿದಿದ್ದರಿಂದ ಮೊಸಳೆ ಸಾವನ್ನಪ್ಪಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. “ಘಟನೆಯ ಉದ್ದಕ್ಕೂ ಆನೆಯು ತನ್ನ ಬಾಲವನ್ನು ಹೇಗೆ ಮೇಲಕ್ಕೆತ್ತಿತ್ತು ಎಂಬುದು ಆಶ್ಚರ್ಯಕರವಾಗಿದೆ” ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಮತ್ತೊಬ್ಬರು, “ಅಮ್ಮ ತುಂಬಾ ಕೋಪಗೊಂಡಿದ್ದರು ! ತನ್ನ ಕುಟುಂಬವನ್ನು ರಕ್ಷಿಸುವ ತಾಯಿಯೊಂದಿಗೆ ಎಂದಿಗೂ ಜಗಳವಾಡಬೇಡಿ !” ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೀವೂ ನೋಡಿ: