ಮಂಗಗಳು ಮಾಡುವ ಕಿತಾಪತಿಗಳು ಅಷ್ಟಿಷ್ಟಲ್ಲ. ನೋಡುಗರನ್ನು ತಮಾಷೆಗೆ ತಳ್ಳಿದರೂ ಇವುಗಳಿಂದ ಹಿಂಸೆ ಅನುಭವಿಸುವವರ ಪಾಡು ಮಾತ್ರ ಹೇಳತೀರದು.
ಅದರಲ್ಲಿಯೂ ಕೆಲವೊಂದು ಸ್ಥಳಗಳಿಗೆ ಹೋಗುವಾಗ ಕೈಯಲ್ಲಿ ತಿಂಡಿಯ ಪೊಟ್ಟಣ ಇದ್ದರಂತೂ ಮುಗಿದೇ ಹೋಯ್ತು. ಅದನ್ನು ಇಟ್ಟುಕೊಂಡವರ ಪಾಡು ದೇವರಿಗೇ ಪ್ರೀತಿ.
ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಮಂಗಗಳಿಗೆ ಆಲೂಗಡ್ಡೆ ಚಿಪ್ಸ್ ಎಂದರೆ ಬಹಳ ಇಷ್ಟ. ಆ ಪೊಟ್ಟಣ ಹಿಡಿದುಕೊಂಡವರನ್ನು ಅದು ಎಂದಿಗೂ ಬಿಡುವುದೇ ಇಲ್ಲ. ಅಂಥದ್ದೇ ಒಂದು ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತನ್ನ ಚಿಪ್ಸ್ ಪ್ಯಾಕ್ ಕೊಡಲು ನಿರಾಕರಿಸಿದ ವ್ಯಕ್ತಿಯೊಬ್ಬನ ಜುಟ್ಟನ್ನು ಹಿಡಿದು ಕೋತಿ ಎಳೆದಾಡಿದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಿಪ್ಸ್ ಪ್ಯಾಕೇಟ್ ನಿಂದ ಚಿಪ್ಸ್ ತಿನ್ನುತ್ತಿದ್ದ. ಮಂಗ ಬಂದು ಅದನ್ನು ಕಸಿದುಕೊಳ್ಳಲು ನೋಡಿದೆ. ಆದರೆ ಆ ವ್ಯಕ್ತಿ ಅದನ್ನು ನೀಡಲಿಲ್ಲ.
ಇದರಿಂದ ಸಿಟ್ಟಿಗೆದ್ದ ಮಂಗ ಆತನ ಕೂದಲು ಹಿಡಿದು ಎಳೆದಾಡಿದೆ. ಇದರಿಂದ ಆತ ಬಿದ್ದು ಚಿಪ್ಸ್ ಎಲ್ಲಾ ನೆಲಕ್ಕೆ ಹೋಗಿದೆ. ನೆಲಕ್ಕೆ ಬಿದ್ದ ಚಿಪ್ಸ್ಗಳನ್ನು ಖುಷಿಯಿಂದ ಮಂಗ ಹೆಕ್ಕಿ ಹೆಕ್ಕಿ ತಿನ್ನುವುದನ್ನು ವಿಡಿಯೋದಲ್ಲಿ ನೋಡಬಹುದು.