ಮೂಕ ಜೀವಿಗಳು ತೋರಿಸೋ ಪ್ರೀತಿಗೆ, ಅದರ ರೀತಿಗೆ ಮನ ಸೋಲದವರೇ ಯಾರೂ ಇಲ್ಲ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತೆ. ಈಗ ಮತ್ತೆ ಅಂತಹದ್ದೆ ವಿಡಿಯೋ ಒಂದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೋತಿಯೊಂದರ ಪಕ್ಕ ಕೂತಿರುತ್ತಾನೆ. ಆತ ಏನೋ ಸಂಕಟ ಆಗುತ್ತಿದೆ ಅನ್ನೋ ರೀತಿಯಲ್ಲಿ ಒದ್ದಾಡುತ್ತಾನೆ. ಕೋತಿಯ ಮುಂದೆ ತಲೆ ಕೆಳಗೆ ಹಾಕಿ ಬಿಕ್ಕಿ-ಬಿಕ್ಕಿ ಅಳುತ್ತಾನೆ. ಕೋತಿ ಕೆಲ ನಿಮಿಷದವರೆಗೆ ಗಮನಿಸಿ ಕೊನೆಗೆ ಆ ವ್ಯಕ್ತಿಯ ಬೆನ್ನು ತಟ್ಟಿ ಸಮಾಧಾನ ಮಾಡುತ್ತೆ.
ಅಷ್ಟಾದರೂ ಆತ ಸುಮ್ಮನಾಗದಾದ, ಆ ವ್ಯಕ್ತಿಯನ್ನ ತನ್ನ ತೊಡೆಯ ಮೇಲೆ ತಲೆ ಇಡಲು ಹೇಳುತ್ತದೆ. ಆತ ಅದನ್ನ ಗಮನಿಸದಿದ್ದಾಗ ಮತ್ತೆ ಮತ್ತೆ ಹೇಳುತ್ತದೆ. ಆತ ಕೊನೆಗೂ ತಲೆ ಇಟ್ಟು ಮಲಗಿಕೊಂಡಾಗ ಆತನ ತಲೆಯನ್ನ ಪ್ರೀತಿಯಿಂದ ನೇವರಿಸುತ್ತದೆ. ಒಂದು ಮೂಕ ಪ್ರಾಣಿ ಆದರೂ ಮನುಷ್ಯನ ನೋವಿಗೆ ಇದು ಸ್ಪಂದಿಸುವ ರೀತಿ ಹೃದಯಕ್ಕೆ ನಾಟುವಂತಿದೆ.
ತನ್ನನ್ನು ತಾನು ಬುದ್ಧಿವಂತ ಜೀವಿ ಅನಿಸಿಕೊಂಡ ಮನುಷ್ಯನೇ ಎಷ್ಟೋ ಬಾರಿ ನಿರ್ಭಾವುಕನಂತೆ ವರ್ತಿಸುತ್ತಿರುತ್ತಾನೆ. ಆದರೆ ಪ್ರಾಣಿಗಳು ಮಾತು ಬರದಿದರೂ, ಮನುಷ್ಯನಷ್ಟು ಬುದ್ಧಿ ಇರದಿದ್ದರೂ ಇವು ತೋರಿಸೋ ಪ್ರೀತಿ ಎಂಥವರನ್ನೂ ಭಾವುಕರನ್ನಾಗಿ ಮಾಡುತ್ತೆ.
ಟ್ವಿಟರ್‌ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋವನ್ನ ಈಗಾಗಲೇ 3.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮತ್ತು 44k ಜನರು ಲೈಕ್ ಕೊಟ್ಟಿದ್ದಾರೆ.