alex Certify ಬೈಕ್ ನಲ್ಲಿ ಕೂತು ಮಂಕಿಯ ಕಪಿಚೇಷ್ಟೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ನಲ್ಲಿ ಕೂತು ಮಂಕಿಯ ಕಪಿಚೇಷ್ಟೆ: ವಿಡಿಯೋ ವೈರಲ್

ಪ್ರಾಣಿಗಳ ಕ್ಯೂಟ್ ವಿಡಿಯೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದೀಗ ಕೋತಿಯೊಂದರ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವಿಡಿಯೋದಲ್ಲಿ, ನಿಲುಗಡೆಯಾದ ಬೈಕ್ ಮೇಲೆ ಕೋತಿಯೊಂದು ಕುಳಿತಿರುವುದನ್ನು ನೋಡಬಹುದು. ಬೈಕ್‌ನಲ್ಲಿ ಕನ್ನಡಿಯನ್ನು ನೋಡಿದ ಮಂಗವು ಒಂದು ಕೈಯಿಂದ ಬೈಕಿನ ಹ್ಯಾಂಡಲ್ ಅನ್ನು ಹಿಡಿದಿರುವುದು ಕಂಡುಬರುತ್ತದೆ. ತನ್ನನ್ನು ತಾನು ಪರೀಕ್ಷಿಸಿಕೊಳ್ಳುವಂತೆ ಕನ್ನಡಿಯನ್ನು ನೋಡುವುದು ತಮಾಷೆಯಾಗಿ ಕಾಣುತ್ತದೆ.

ಇನ್ನು ಕನ್ನಡಿ ನೋಡಿದ ಕೋತಿಯು ಕನ್ನಡಿಯೊಳಗೆ ತನ್ನ ಪ್ರತಿಬಿಂಬವನ್ನು ನೋಡಿ, ಇನ್ನೊಂದು ಕೋತಿ ಇದೆಯೇನು ಎಂದು ಭಾವಿಸುವಂತಿದೆ ಅದರ ಹಾವಭಾವ. ಕನ್ನಡಿ ನೋಡುತ್ತಾ ಅದು ತನ್ನ ತಲೆಕೆರೆದುಕೊಂಡಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಡಿಯೋ ನೋಡಿ ಎಂಜಾಯ್ ಮಾಡಿದ್ದಾರೆ.

https://www.instagram.com/reel/CU6gnmLoyEq/?utm_source=ig_embed&ig_rid=e42838f3-54ab-4964-8320-66d0444b2a49

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...