alex Certify ಮದ್ವೆ ಮನೆಯಲ್ಲಿ ಇದೆಂಥಾ ನೃತ್ಯ….? ಪ್ಲೇಟ್​, ಕುರ್ಚಿ ಹಿಡಿದು, ಬಡಿದು ಡಾನ್ಸ್​ ಮಾಡಿದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ವೆ ಮನೆಯಲ್ಲಿ ಇದೆಂಥಾ ನೃತ್ಯ….? ಪ್ಲೇಟ್​, ಕುರ್ಚಿ ಹಿಡಿದು, ಬಡಿದು ಡಾನ್ಸ್​ ಮಾಡಿದ ಯುವಕರು

ಮದುವೆಯ ದಿನ ನೃತ್ಯ ಮಾಡುವುದು ಮಾಮೂಲು. ಆದರೆ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿರುವ ಈ ನೃತ್ಯ ನೋಡಿದರೆ ಶಾಕ್​ ಆಗುವುದು ಗ್ಯಾರೆಂಟಿ. ಏಕೆಂದರೆ ಮದುವೆಯ ಮನೆಯಲ್ಲಿ ಯುವಕರ ಗುಂಪೊಂದು ಖಾಲಿ ಪಾತ್ರೆಗಳು ಮತ್ತು ಕುರ್ಚಿಗಳನ್ನು ಹಿಡಿದು ನರ್ತಿಸಿದ್ದಾರೆ. ಕೆಲವರು ಪಾತ್ರೆಗಳನ್ನು ಒಡೆದು ಹಾಕಿದ್ದಾರೆ !

2022 ರ ಡಿಸೆಂಬರ್ 06 ರಂದು ಅಂಕಿತ್ ಎಂಬ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಈ ಕಿರು ವಿಡಿಯೋ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ, ವಿಡಿಯೋ 15 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

ಹಾಡಿಗೆ ನೃತ್ಯ ಮಾಡುತ್ತಿರುವ ಯುವಕರು, ಕುರ್ಚಿಗಳು ಮತ್ತು ಖಾಲಿ ಟೇಬಲ್‌ಗಳ ಮೇಲೆ ಬಡಿದುಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲಲ್ಲಿ ಕೆಲವು ಒಡೆದು ಹೋಗಿರುವ ಪ್ಲಾಸ್ಟಿಕ್​ ಪ್ಲೇಟುಗಳನ್ನೂ ವಿಡಿಯೋದಲ್ಲಿ ನೋಡಬಹುದು. ಇದೆಂಥ ವಿಚಿತ್ರ ನೃತ್ಯ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂಥ ಡಿಫರೆಂಟ್​ ನೃತ್ಯ ಹಿಂದೆಂದೂ ನೋಡಿರಲಿಲ್ಲ ಎಂದು ಹಲವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...