ಹಳೆಯ ಎಟಿಎಂ ಮಷಿನ್ನ್ನು ಖರೀದಿ ಮಾಡಿದ್ದ ಯುವಕರ ಗುಂಪಿಗೆ ದೊಡ್ಡ ಆಶ್ಚರ್ಯವೊಂದು ಕಾದಿತ್ತು. ಈ ಎಟಿಎಂ ಮಷಿನ್ನ್ನು ತೆರೆದು ನೋಡಿದ ವೇಳೆ ಯುವಕರಿಗೆ ಬರೋಬ್ಬರಿ 1.49 ಲಕ್ಷ ರೂಪಾಯಿ ಸಿಕ್ಕಿದೆ.
ಬಳಕೆದಾರರ ಸುರಕ್ಷತೆಗಾಗಿ ʼಗೂಗಲ್ʼ ನಿಂದ ಮತ್ತೊಂದು ಮಹತ್ವದ ಕ್ರಮ
ಯುವಕರ ಗುಂಪು 22 ಸಾವಿರ ರೂಪಾಯಿಗಳನ್ನು ನೀಡಿ ಈ ಎಟಿಎಂ ಮಷಿನ್ನ್ನು ಖರೀದಿ ಮಾಡಿತ್ತು. ಡ್ರಿಲ್ ಹಾಗೂ ಸುತ್ತಿಗೆಯನ್ನು ಬಳಸಿ ಈ ಎಟಿಎಂ ಮಷಿನ್ನ್ನು ತೆರೆದು ನೋಡಿದ್ದಾರೆ.
ಕ್ಯಾಮರಾವನ್ನು ಹಿಡಿದ ಯುವಕ ಇದರ ಬಗ್ಗೆ ಇಂಚಿಂಚೂ ಮಾಹಿತಿಯನ್ನು ನೀಡಿದ್ದಾನೆ. ಸ್ವಂತ ಎಟಿಎಂ ಹೊಂದಿದ್ದ ಮಾಜಿ ಮಾಲೀಕ ಇದನ್ನು ನಮಗೆ ಮಾರಾಟ ಮಾಡಿದ್ದ. ಮಾರಾಟ ಮಾಡುವ ವೇಳೆ ಮಾಜಿ ಮಾಲೀಕ ಇದರಲ್ಲಿ ಏನೇ ಇದ್ದರೂ ಅದು ನಿಮಗೆ ಎಂದು ಹೇಳಿದ್ದಾನೆ. ಇದಕ್ಕೆ ಕೀ ಇಲ್ಲದ ಕಾರಣ ಎಟಿಎಂನ್ನು ಒಡೆದು ನೋಡಲಾಯ್ತು. ಈ ವೇಳೆ ನಮಗೆ ಹಣ ದೊರಕಿದೆ ಎಂದು ಹೇಳಿದ್ದಾನೆ.
ಫೇಸ್ ಬುಕ್, ವಾಟ್ಸಾಪ್ ಸ್ಥಗಿತದ ಬಳಿಕ ‘ಟೆಲಿಗ್ರಾಂ’ಗಾದ ಲಾಭವೆಷ್ಟು ಗೊತ್ತಾ…..? ಇಲ್ಲಿದೆ ಇಂಟ್ರಸ್ಟಿಂಗ್ ವಿವರ
ಹಣವನ್ನು ಕಂಡ ತಕ್ಷಣ ಯುವಕರ ಗುಂಪು ಖುಷಿಯಲ್ಲಿ ಕೂಗಾಡಿದೆ. ಇದು ನಮ್ಮ ಜೀವನದ ಅತ್ಯುತ್ತಮ ದಿನ ಎಂದು ಓರ್ವ ಯುವಕ ಹೇಳೋದನ್ನು ಕೇಳಬಹುದಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಯುವಕರ ಅದೃಷ್ಟ ಕಂಡು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.