
ಮಹಿಳೆಯರು, ಶಾಲಾ ಬಾಲಕಿಯರು ಅಥವಾ ರಸ್ತೆಯಲ್ಲಿ ಗುಂಪುಗಳ ಹೊಡೆದಾಟಗಳ ಹಲವಾರು ವಿಡಿಯೊಗಳು ಈ ಹಿಂದೆ ವೈರಲ್ ಆಗಿವೆ. ಇಂತಹ ಆಘಾತಕಾರಿ ಹೊಡೆದಾಟದ ಅಂತಹ ಮತ್ತೊಂದು ವೀಡಿಯೊ ಈಗ ವೈರಲ್ ಆಗುತ್ತಿದೆ.
ಅಲ್ಲಿ ವಯಸ್ಸಾದ ವ್ಯಕ್ತಿ ಮತ್ತು ಮಧ್ಯವಯಸ್ಕ ವ್ಯಕ್ತಿ ಪರಸ್ಪರ ಚಪ್ಪಲಿಯಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಇಬ್ಬರು ಮೊದಲು ಮಾತಿನ ಚಕಮಕಿ ನಡೆಸಿ ಪರಸ್ಪರ ಕಪಾಳಮೋಕ್ಷ ಮಾಡುತ್ತಾರೆ. ಆದರೆ ವೃದ್ಧ ವ್ಯಕ್ತಿ ಚಪ್ಪಲಿಯನ್ನು ಕಳಚುತ್ತಿದ್ದಂತೆ ಎದುರಿದ್ದ ವ್ಯಕ್ತಿ ಸಹ ತನ್ನ ಪಾದದಿಂದ ಶೂ ಅನ್ನು ತೆಗೆಯುತ್ತಾನೆ. ನಂತರ ಇಬ್ಬರೂ ಆಕ್ರಮಣಕಾರಿಯಾಗಿ ಒಬ್ಬರನ್ನೊಬ್ಬರು ಥಳಿಸುತ್ತಾರೆ ಮತ್ತು ಚಪ್ಪಲ್ಗಳಿಂದ ಪರಸ್ಪರರ ಮುಖಕ್ಕೆ ಹೊಡೆದುಕೊಳ್ಳುತ್ತಾರೆ.
ವಯಸ್ಸಾದ ವ್ಯಕ್ತಿ ತನ್ನ ಕೋಪವನ್ನು ಎದುರಾಳಿ ವ್ಯಕ್ತಿಯ ಮೇಲೆ ಹೊರಹಾಕಿದಾಗ, ಆತ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ವೇಳೆ ತಳ್ಳಾಟವೂ ನಡೆಯುತ್ತದೆ. ಪರಸ್ಪರ ನಿಂದಿಸಿಕೊಳ್ಳುತ್ತಾರೆ. ಸುತ್ತಲೂ ನಿಂತಿರುವವರು ಇಬ್ಬರನ್ನು ಬಿಡಿಸಲು ಹೋಗದೇ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದು ವಿಚಿತ್ರ. ಈ ಘಟನೆ ಎಲ್ಲಿ ನಡೆದಿದ್ದು ಎಂದು ಗೊತ್ತಾಗಿಲ್ಲ.
https://youtu.be/qS8XINyJw7I