ಬಿ.ಟೆಕ್ ಅಥವಾ ಎಂಬಿಎಯಂತಹ ಪದವಿಗಳನ್ನು ಹೊಂದಿರುವ ಹಲವರು ಚಾಯ್‌ವಾಲಾಗಳಾಗಿ ಬದಲಾಗುವ ಮೂಲಕ ತಮ್ಮ ಯಶಸ್ವಿ ಸ್ಟೋರಿ ಹಂಚಿಕೊಳ್ಳುವುದನ್ನು ನೀವು ಕೇಳಿರಬಹುದು, ಇದೀಗ ಇದೇ ಸಾಲಿಗೆ ಮತ್ತೊಂದು ಕಥೆ ಸೇರ್ಪಡೆಯಾಗಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ತನ್ನ ವ್ಯಾಸಂಗವನ್ನು ಮುಂದುವರಿಸುವಾಗ ವ್ಯವಹಾರವನ್ನೂ ನಿರ್ವಹಿಸುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವರ್ತಿಕಾ ಸಿಂಗ್ ಬಿಹಾರದಿಂದ ಫರಿದಾಬಾದ್‌ಗೆ ಬಿ.ಟೆಕ್ ಓದಲು ಬಂದಿದ್ದರು. ಆದರೆ ಇದರ ಜೊತೆಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಕನಸು ಕಾಣುತ್ತಿದ್ದರು. ಪದವಿ ಪೂರ್ಣಗೊಂಡ ಬಳಿಕ ಇದನ್ನು ಅನುಷ್ಟಾನಗೊಳಿಸುವ ಬದಲು ತನ್ನ ಬಿಡುವಿನ ವೇಳೆಯಲ್ಲಿ, ವರ್ತಿಕಾ ಗೇಟ್ ಬಳಿ ‘ಬಿ.ಟೆಕ್ ಚಾಯ್ ವಾಲಿ’ ಎಂಬ ತನ್ನ ಸ್ಟಾರ್ಟಪ್ ಸ್ಟಾಲ್‌ನಲ್ಲಿ ಚಹಾ ತಯಾರಿಸಿ ಮಾರಾಟ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ವೈರಲ್ ವೀಡಿಯೊದಲ್ಲಿ ತನ್ನ ಕಥೆಯನ್ನು ಹೇಳುತ್ತಾ, ವರ್ತಿಕಾ ಅವರು ಮಸಾಲಾ ಚಾಯ್ ಅನ್ನು 20 ರೂ.ಗೆ, ಲೆಮನ್ ಟೀಯನ್ನು 20 ರೂ. ಮತ್ತು ಸಾಮಾನ್ಯ ಚಾಯ್ ಅನ್ನು 10 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವರ್ತಿಕಾ ಅವರ ಕಾರ್ಯಕ್ಕೆ ಶಭಾಶ್ ಹೇಳಿದ್ದಾರೆ.