ಜಾರ್ಜಿಯಾದ ಪೆರಿಯಲ್ಲಿರುವ ಮೆಕ್ಡೊನಾಲ್ಡ್ ಉದ್ಯೋಗಿಯೊಬ್ಬರು ನಾಲ್ಕು ಗಂಟೆಗಳಲ್ಲಿ ಸಿದ್ಧಪಡಿಸಬೇಕಾದ 6,400 ಆಹಾರದ ಬೃಹತ್ ಆರ್ಡರ್ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, ಬ್ರಿಟಾನಿ ಕರ್ಟಿಸ್ ಫಾಸ್ಟ್ ಫುಡ್ ಆಹಾರಗಳಿಂದ ತುಂಬಿದ ಬಾಕ್ಸ್ಗಳನ್ನು ತೋರಿಸಲಾಗಿದೆ. ಇದರಲ್ಲಿ 1,600 ಮೆಕ್ ಚಿಕನ್ ಸ್ಯಾಂಡ್ವಿಚ್ಗಳು, 1,600 ಮೆಕ್ಡಬಲ್ಸ್ ಮತ್ತು 3,200 ಚಾಕೊಲೇಟ್ ಚಿಪ್ ಕುಕೀಗಳನ್ನು ಪ್ಯಾಕ್ ಮಾಡಲಾಗಿದೆ.
ಗ್ರಾಹಕರೊಬ್ಬರು ಕರೆ ಮಾಡಿ ತನಗೆ 4 ಗಂಟೆಯಲ್ಲಿ 6,400 ಆಹಾರವನ್ನು ಪಾರ್ಸೆಲ್ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಇಷ್ಟೊಂದು ಪ್ರಮಾಣದ ಆಹಾರವನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಸಿದ್ಧಪಡಿಸಬೇಕಿತ್ತು. ಅಲ್ಲದೆ, ಕೇವಲ 4 ಗಂಟೆಗಳಲ್ಲಿ ಇಷ್ಟೊಂದು ಪ್ರಮಾಣದ ಆಹಾರವನ್ನು ಬೇಯಿಸಲು ಮತ್ತು ಪ್ಯಾಕ್ ಮಾಡುವುದು ಬಹಳ ಕಷ್ಟಕರ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇಷ್ಟೊಂದು ಆಹಾರ ಬೇಯಿಸಿ ಪ್ಯಾಕ್ ಮಾಡಲು ಇಷ್ಟು ಸಮಯ ಸಾಕಾಗುವುದಿಲ್ಲ.
ಆದರೆ, ಮೆಕ್ಡೊನಾಲ್ಡ್ ಉದ್ಯೋಗಿ ಈ ಸಾಹಸವನ್ನು ಮಾಡಿದ್ದಾರೆ. ಇನ್ನು ಈ ಆಹಾರಗಳಿಗೆ 7,400 ಡಾಲರ್ ಗಳಷ್ಟು ವೆಚ್ಚ ತಗುಲಿದೆಯಂತೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ.