ಅಂಗಡಿ ಲೂಟಿ ಮಾಡಲು ಪ್ರಯತ್ನಿಸಿದ ಮುಸುಕು ಧಾರಿಯನ್ನು ಅಂಗಡಿ ಮಾಲೀಕ ನೆಲಕ್ಕೆ ಕೆಡವಿ ಚಚ್ಚಿದ ಪ್ರಸಂಗ ಅಮೆರಿಕಾದಲ್ಲಿ ನಡೆದಿದೆ.
ಕಿರಾಣಿ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ದರೋಡೆಗೆ ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲಿ ಇರುವಂತೆ ಮುಸುಕುಧಾರಿ ವ್ಯಕ್ತಿ ರಾಜಾರೋಷವಾಗಿ ಅಂಗಡಿಯೊಳಗೆ ನುಗ್ಗಿ ಅಲ್ಲಿದ್ದ ಉತ್ಪನ್ನಗಳನ್ನು ದೊಡ್ಡ ಬಕೆಟ್‌ಗೆ ತುಂಬಿಸಿಕೊಳ್ಳುತ್ತಾನೆ. ಅದನ್ನು ಅಲ್ಲಿದ್ದ ಅಂಗಡಿ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿ ಪ್ರಶ್ನಿಸುತ್ತಾರೆ.
ಆ ಮುಸುಕುಧಾರಿ ಮಾತ್ರ ತನ್ನ ಚಟುವಟಿಕೆ ತೀವ್ರಗೊಳಿಸುತ್ತಾನೆ. ಮತ್ತು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಇದೆಲ್ಲವೂ ಸಂಪೂರ್ಣವಾಗಿ ಸೆರೆಯಾಗಿದೆ.
ಬಳಿಕ ಅಂಗಡಿ ಮಾಲೀಕರಾದ ಸಿಖ್ ವ್ಯಕ್ತಿ, ದೊಡ್ಡ ಕೋಲಿನೊಂದಿಗೆ ಆಗಮಿಸಿ ಬಡಿಯಲು ಆರಂಭಿಸುತ್ತಾನೆ. ಅಲ್ಲಿದ್ದ ಇನ್ನೊಬ್ಬ ವ್ಯಕ್ತಿ ಅಂಗಡಿ ಮಾಲೀಕನ ರಕ್ಷಣೆಗೆ ಬರುತ್ತಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದ ಅಂಗಡಿ ಮಾಲೀಕನನ್ನು ನೆಟ್ಟಿಗರು ಹೀರೋ ಎಂದು ಪ್ರಶಂಸಿಸುತ್ತಿದ್ದಾರೆ.
“ನಾನು ಹಿಂಸೆಯನ್ನು ಬೆಂಬಲಿಸದಿದ್ದರೂ, ಇದು ಅತ್ಯುತ್ತಮ ವೀಡಿಯೊ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ ಮತ್ತೊಬ್ಬರು ತಕ್ಷಣದ ಕರ್ಮಫಲ ಎಂದು ಅಭಿಪ್ರಾಯಪಟ್ಟಿದ್ದಾರೆ.