ಇಂಡಿಗೋ ಗಗನಸಖಿಯು ವಿಮಾನದಲ್ಲಿ ಸಿಂಹಳೀಯ ಹಾಡು ಮನಿಕೆ ಮಗೆ ಹಿತೆಗೆ ನೃತ್ಯ ಮಾಡಿದ ಬಳಿಕ ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಆಕೆಯ ನೃತ್ಯವು ಎಷ್ಟು ಜನಪ್ರಿಯವಾಯಿತು ಎಂದರೆ ಅದು ಕ್ಯಾಬಿನ್ ಸಿಬ್ಬಂದಿಯಲ್ಲಿ ಮತ್ತೆ ಹೊಸ ಹೊಸ ನೃತ್ಯ ಮಾಡಲು ಪ್ರೇರೇಪಿಸಿತು. ಇತರ ಏರ್ಲೈನ್ಗಳ ಹಲವಾರು ಗಗನಸಖಿಯರು ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.
ಇದೀಗ ಆಯತ್ ಎಂಬ ಇಂಡಿಗೋ ಏರ್ ಹೋಸ್ಟೆಸ್ ಹೊಸ ಡ್ಯಾನ್ಸ್ ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದಾರೆ. ಇದರಲ್ಲಿ ಅವರು ಜುಗ್ನು ಸವಾಲನ್ನು ಎದುರಿಸಿದ್ದಾರೆ. ಮೂಲ ಮ್ಯೂಸಿಕ್ ವಿಡಿಯೋದಲ್ಲಿ ಬಾದ್ಶಾ ಮತ್ತು ಆಕಾಂಕ್ಷಾ ಶರ್ಮಾ ಮಾಡಿರೋ ಸ್ಟೆಪ್ಸ್ ಅನ್ನೇ ಆಯತ್ ಕೂಡ ಅನುಸರಿಸಿದ್ದಾರೆ.
ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಕಪ್ಪು-ಬಿಳಿ ಬಣ್ಣದ ಸ್ಕರ್ಟ್ ತೊಟ್ಟ ಗಗನಸಖಿ ಆಯತ್ ಟೆರೇಸ್ ಮೇಲೆ ನಿಂತುಕೊಂಡು ಮ್ಯೂಸಿಕ್ ಗೆ ಬಹಳ ಸುಂದರವಾಗಿ ಹೆಜ್ಜೆ ಹಾಕಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಜುಗ್ನು ಜ್ವರ ಕಾಣಿಸಿಕೊಂಡಿದ್ದು, ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ಈ ಮ್ಯೂಸಿಕ್ ಗೆ ಹೆಜ್ಜೆ ಹಾಕುತ್ತಿದೆ. ಸದ್ಯ ಈ ಮ್ಯೂಸಿಕ್ ಟ್ರೆಂಡಿಂಗ್ ಪಟ್ಟಿಯಲ್ಲಿದೆ,
ಇನ್ನು ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಜುಗ್ನು ಜ್ವರ ಇನ್ನೂ ಇದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಗಗನಸಖಿಯ ಡ್ಯಾನ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ವಿಭಾಗವು ಪ್ರೀತಿ ಮತ್ತು ಹೃದಯದ ಎಮೋಜಿಗಳಿಂದ ತುಂಬಿದೆ.
https://www.youtube.com/watch?v=-yXt3q4WyqQ