ಶ್ರೀಲಂಕಾದ ಗಾಯಕ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮನಿಕೆ ಮಾಗೆ ಹಿತೆ ಹಾಡು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಾಡಿಗೆ ಹಲವಾರು ಮಂದಿ ವಿಭಿನ್ನ ಶೈಲಿಗಳಲ್ಲಿ ನೃತ್ಯ ಕೂಡ ಮಾಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ ಜನರು ಬಿದ್ದು ಬಿದ್ದು ನಕ್ಕಿದ್ದಾರೆ.
ಹಿರಿಯ ವ್ಯಕ್ತಿಯೊಬ್ಬರು ಈ ಜನಪ್ರಿಯ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿದ್ದಾರೆ. ಪದಗಳು ಅರ್ಥವಾಗದ ಕಾರಣ, ಮನಹರಿಯ ಬದಲಿಗೆ ಮದರಿ ಎಂದು ಹೇಳುತ್ತಾ ಪದಗಳನ್ನು ಪುನರಾವರ್ತಿಸಿದ್ದಾರೆ. ಅವರು ಹಾಡನ್ನು ಹಾಡುವ ರೀತಿ ಜನರನ್ನು ನಕ್ಕು ನಗಿಸಿದೆ.
ಚಳಿಗಾಲದ ನೆಗಡಿ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ.
https://youtu.be/bFXorh5mcpc