
ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ರೈಲಿನ ಬಾಗಿಲು ಒಡೆಯಲು ಪ್ರಯತ್ನಿಸುತ್ತಿರುವ ದೃಶ್ಯ ಕಂಡುಬಂದಿದೆ. ಮಾಧ್ಯಮದವರು ಈ ಘಟನೆಯನ್ನು ಚಿತ್ರೀಕರಿಸುತ್ತಿದ್ದರು.
ಆದರೆ, ಬಾಗಿಲು ಒಡೆಯಲು ಆತ ಪ್ರಯತ್ನಿಸುತ್ತಿದ್ದ ಕಾರಣ ಸ್ಪಷ್ಟವಾಗಿಲ್ಲ.
ಬಾಗಿಲು ಒಡೆಯಲು ಪ್ರಯತ್ನಿಸಿದ ಕೆಲವೇ ಕ್ಷಣಗಳಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಜನರ ಗುಂಪಿನಿಂದ ಹೊರಬಂದು ಆತನಿಗೆ ಹೊಡೆದಿದ್ದಾರೆ. ನಂತರ ಆತನನ್ನು ಹಿಡಿದು ಕರೆದುಕೊಂಡು ಹೋಗಿದ್ದಾರೆ.
ಈ ವೀಡಿಯೊ ಎಕ್ಸ್ ನಲ್ಲಿ 2.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 6.5 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ.
ಒಬ್ಬ ಎಕ್ಸ್ ಬಳಕೆದಾರರು ಹಾಸ್ಯಮಯವಾಗಿ “ಗಾಜು ಒಡೆಯಲಿಲ್ಲ, ಆದರೆ ಆತನ ಕೆಲವು ಭಾಗಗಳು ಇಂದು ರಾತ್ರಿ ಕಸ್ಟಡಿಯಲ್ಲಿ ಒಡೆಯುತ್ತವೆ. ಮತ್ತು ಅವು ಪ್ರಮುಖ ಭಾಗಗಳಾಗಿರುತ್ತವೆ” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು “ಪ್ರಯಾಣಿಕರು ಬಾಗಿಲು ಲಾಕ್ ಮಾಡಿದ್ದಾರೆ ಎಂದರೆ ನೀವು ಅದನ್ನು ಒಡೆಯುತ್ತೀರಿ ಎಂದಲ್ಲ. ಬದಲಿಗೆ ನೀವು ಪೊಲೀಸರಿಗೆ ತಿಳಿಸಬಹುದು…… ಸಾರ್ವಜನಿಕ ಆಸ್ತಿಯನ್ನು ಏಕೆ ಧ್ವಂಸ ಮಾಡುತ್ತೀರಿ ? ಅದು ಮೂರ್ಖತನ” ಎಂದು ಬರೆದಿದ್ದಾರೆ.
We Need To Learn Civic Sense 🇮🇳 pic.twitter.com/bZ1jikdMAL
— Desidudewithsign (@Nikhilsingh21_) February 18, 2025