
ನಾಗಿನ್ ಡ್ಯಾನ್ಸ್ ಬಹಳ ಫೇಮಸ್. ಪಾರ್ಟಿಗಳಲ್ಲಿ ಕಾಮನ್ ಎಂಬಂತಾಗಿದೆ. ಬಾಂಗ್ಲಾ ಕ್ರಿಕೆಟಿಗರಿಗಂತು ಬಹಳ ಅಚ್ಚುಮೆಚ್ಚು ಎಂಬುದಕ್ಕೆ ಇತ್ತೀಚಿನ ಒಂದು ಉದಾಹರಣೆಯೇ ಸಾಕು.
ಇದೀಗ ವ್ಯಕ್ತಿಯೊಬ್ಬ ನಾಗಿನ್ ಡ್ಯಾನ್ಸನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಹಾವಿನಂತೆ ಇನ್ನೊಬ್ಬ ವ್ಯಕ್ತಿಯ ಮೇಲೆ ಎಗರುವ ಉಲ್ಲಾಸದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಳ್ಳಿಯೊಂದರಲ್ಲಿ ಇಬ್ಬರು ನಾಗಿನ್ ಡ್ಯಾನ್ಸ್ ಮಾಡುತ್ತಿದ್ದು, ಜನರು ಅವರನ್ನು ನೋಡುತ್ತಿರುವಾಗ ಹಾವಿನಂತೆ ತಲೆಯ ಮೇಲೆ ಕೆ ಇಟ್ಟುಕೊಂಡು ಡ್ಯಾನ್ಸ್ ಮಾಡುತ್ತಿದ್ದಾಗ ಗರಗರನೆ ತಿರುಗುತ್ತಾ ದೇಹದ ಶಕ್ತಿಯೊಂದಿಗೆ ಅಕ್ಷರಶಃ ಕೆಲವು ಅಡಿಗಳಷ್ಟು ದೂರ ಹಾರುತ್ತಾನೆ, ಪುಂಗಿ ಊದುವವನ ಪಾತ್ರದಲ್ಲಿದ್ದ ಇನ್ನೊಬ್ಬನು ಹಾವಿನ ದಾಳಿಯಿಂದ ತಪ್ಪಿಸಿಕೊಳ್ಳಲು ಎಗರುತ್ತಾನೆ. ಇದನ್ನು ಕಂಡ ಸುತ್ತಮುತ್ತಲಿನವರು ಬೆಚ್ಚಿ ಬೀಳುತ್ತಾರೆ.
ಆತ ಭಾರಿ ಜಂಪ್‌ನಿಂದ ಗಾಯಗೊಂಡನೇ ಎಂಬುದು ತಿಳಿದಿಲ್ಲ. ನೆಟ್ಟಿಗರು ಮಾತ್ರ ವಿಡಿಯೋ ನೋಡಿ ಅಚ್ಚರಿ ಮತ್ತು ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.