ಹಾಡುಗಾರಿಕೆ ಎಲ್ಲರಿಂದ ಸಾಧ್ಯವಿಲ್ಲ. ಅದಕ್ಕೊಂದು ಶಿಸ್ತು, ನಿಯತ ಪ್ರಯತ್ನ ಮತ್ತು ಅಭ್ಯಾಸದ ಬಲಬೇಕು. ಅದಿಲ್ಲದೆ, ನಾನೂ ಹಾಡಬಲ್ಲೆ ಎಂದರೆ ನಗೆಪಾಟಲೀಗೀಡಾಗುವುದು ಪಕ್ಕಾ. ಆದಾಗ್ಯೂ ಇಂತಹ ಜನರದ್ದೇ ಒಂದು ವರ್ಗವಿದೆ. ಆರ್ಕೆಸ್ಟ್ರಾ ನಡೆದಾಗ ಸ್ಥಳೀಯರು ಇಂತಹ ಪ್ರಯತ್ನ ಮಾಡುತ್ತಿರುತ್ತಾರೆ.
ಇವರ ಇಂತಹ ಪ್ರಯತ್ನಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದಲ್ಲದೆ, ಇನ್ನು ಕೆಲವರು ಸೋಷಿಯಲ್ ಮೀಡಿಯಾಕ್ಕಾಗಿಯೇ ಇಂತಹ ವಿಡಿಯೋ ಮಾಡುತ್ತಿರುತ್ತಾರೆ. ಅಂತಹ ಒಂದು ವಿಡಿಯೋ ಇದು.
BIG NEWS: ವಿ.ಹೆಚ್.ಪಿ.ಯಿಂದ ಶ್ರೀರಂಗಪಟ್ಟಣ ಚಲೋ; ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ; ಎಸ್ ಪಿ ಎಚ್ಚರಿಕೆ
‘ಯೇ ದೋಸ್ತಿ ಹಮ್ ನಹೀ ತೋಡೇಂಗೆ’ ಎಂದು ವ್ಯಕ್ತಿಯೊಬ್ಬ ಹಾಡುತ್ತಿರುವ ವಿಡಿಯೋ ತುಣುಕು ಯೂಟ್ಯೂಬ್‌ನಲ್ಲಿದ್ದು, ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ನೀವಂದುಕೊಂಡಂತೆ ಬಹಳ ಭಾವಪೂರ್ಣ ಹಾಡುಗಾರಿಕೆ ಕಾರಣಕ್ಕೆ ವೈರಲ್ ಆಗಿಲ್ಲ!
ಬಹಳ ಜನಪ್ರಿಯ ಸ್ನೇಹ ಗೀತೆಯನ್ನು ಎಷ್ಟು ಸಾಧ್ಯವೋ ಅಷ್ಟು ನೀರಸವಾಗಿ, ಅಸಮಂಜಸವಾಗಿ ಹಾಡುತ್ತಿರುವ ದೃಶ್ಯವಿದೆ ಅದರಲ್ಲಿ. ಆರ್ಕೆಸ್ಟ್ರಾ ತಂಡವೂ ಈ ಹಾಡುಗಾರಿಕೆಯಿಂದ ಗಲಿಬಿಲಿಗೊಂಡು ತಮ್ಮದೇ ಆದ ರೀತಿಯಲ್ಲಿ ಅದನ್ನು ಸರಿದೂಗಿಸುವ ಪ್ರಯತ್ನಮಾಡಿ ಕೊನೆಗೆ ನಕ್ಕು ಬಿಡುವ ದೃಶ್ಯವೂ ಇದೆ.
ಬಹು ಪ್ರಸಿದ್ಧ ಶೋಲೆ ಸಿನಿಮಾದಿಂದ ಆಯ್ಕೆ ಮಾಡಿಕೊಂಡಿರುವ ಈ ಹಾಡನ್ನು ಕೇಳಿದ ಬಳಿಕ ಯಾರಿಗೇ ಆದರೂ ಮೂಲ ಗಾಯಕರ ಧ್ವನಿ ಮರೆತೇ ಹೋಗಬಹುದು. ತಲೆನೋವೂ ಬಂದುಬಿಡಬಹುದು. ನಿಜ ಹೇಳಬೇಕು ಎಂದರೆ ಡಿಂಗ್‌ಚಕ್ ಪೂಜಾನೇ ಎಷ್ಟೋ ಬೆಟರ್! ಆದರೂ, ನೀವೊಮ್ಮೆ ಈ ವಿಡಿಯೋ ನೋಡಿಬಿಡಿ……