ಸಾಮಾಜಿಕ ಜಾಲತಾಣದಲ್ಲಿ ನಗು ತರಿಸುವ ಅನೇಕ ವಿಡಿಯೋಗಳು ಬರುತ್ತಿರುತ್ತವೆ. ಈ ಸರಣಿಯಲ್ಲಿ ಹೊಸ ವಿಡಿಯೋವೊಂದು ನೆಟ್ಟಿಗರನ್ನು ಬಹಳ ಖುಷಿಪಡಿಸಿದೆ.
ಒಬ್ಬ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ಅಡ್ಜೆಸ್ಟ್ ಮೆಂಟ್ ಮಾಡಿಕೊಳ್ಳುವ ಸವಾಲನ್ನು ಸ್ವೀಕರಿಸಿ ಪ್ರಯತ್ನಿಸುತ್ತಿರುವುದನ್ನು ವಿಡಿಯೊ ತೋರಿಸಿದೆ.
ತನ್ನ ಸ್ನೇಹಿತನಿಗೆ ಕೋಳಿಯಂತೆ ಕುಣಿಯಲು ಅವನ ಕಾಲುಗಳ ಕೆಳಗೆ ಕೈ ಹಾಕಲು ಹೇಳುತ್ತಾನೆ. ನಂತರ ಅವನು ಅದೇ ರೀತಿ ನಟಿಸುತ್ತಾನೆ. ಆದರೆ ಅವನೊಂದಿಗೆ ಚಾಲೆಂಜ್ ಮಾಡುವ ಬದಲು, ಆತ ತನ್ನ ಸ್ನೇಹಿತನನ್ನು ಚಿಕ್ಕ ಮಗುವಿನಂತೆ ಎತ್ತಿಕೊಂಡು ಮರಕ್ಕೆ ಹತ್ತಿಬಿಡುತ್ತಾನೆ.
ಆಗ ನೋಡಿ ಪರದಾಟ. ಸವಾಲು ಹಾಕಿದವನ ಸ್ಥಿತಿ. ಮರದಿಂದ ಇಳಿಯಲು ಆಗದೇ ಪರದಾಡುತ್ತಾನೆ. ಆತ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೆ, ಅವನು ಮರದಿಂದ ಬೀಳಬಹುದು. ಈ ದೃಶ್ಯವನ್ನು ನೋಡಿದ ಸುತ್ತಮುತ್ತಲಿನವರಿಗೆ ನಗು ತಡೆಯಲಾಗಲಿಲ್ಲ.
ನೆಟ್ಟಿಗರು ಈ ವಿಡಿಯೋ ನೋಡಿ ಅನೇಕ ಉದಾಹರಣೆಗಳನ್ನು ಕೊಟ್ಟು ನಕ್ಕು ನಲಿದಿದ್ದಾರೆ. ಕೆಲವರು ತಮ್ಮ ಉದಾಹರಣೆಗಳನ್ನು ಸಹ ಕೊಟ್ಟಿದ್ದಾರೆ.
https://www.instagram.com/p/CiEhBF-J1yY/?utm_source=ig_embed&utm_campaign=invalid&ig_rid=6ea237e3-d9f2-464e-bd53-df0358fd1d73