ಪ್ರಾಣಿಗಳ ಚಿನ್ನಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ಭಾರೀ ಹಿಟ್ ಆಗುತ್ತವೆ. ನಾಯಿಮರಿಗಳು, ಬೆಕ್ಕಿನ ಮರಿಗಳ ಚೇಷ್ಟೆಯ ವಿಡಿಯೋಗಳಂತೂ ನೆಟ್ಟಿಗರಿಗೆ ಇನ್ನೂ ಫೇವರಿಟ್.
ಇಂಥದ್ದೇ ಒಂದು ವಿಡಿಯೋದಲ್ಲಿ ಕಡಲತೀರದಲ್ಲಿ ನಾಯಿ ಮರಿಯೊಂದಿಗೆ ವ್ಯಕ್ತಿಯೊಬ್ಬರು ಆಟವಾಡುತ್ತಿರುವುದು ವೈರಲ್ ಆಗಿದೆ. ಕಡಲತೀರದಲ್ಲಿ ಹಾಗೇ ಓಡುತ್ತಾ ಸಾಗುವ ವ್ಯಕ್ತಿಯನ್ನು ಹಿಂಬಾಲಿಸುವ ನಾಯಿ ಮರಿ, ತನ್ನ ಪುಟಾಣಿ ಕಾಲುಗಳ ಮೇಲೆ ಸಾಧ್ಯವಾದಷ್ಟು ಬೇಗ ಓಡಲು ನೋಡುತ್ತಿದೆ.
ಇಪಿಎಫ್ ನಾಮಿನಿ ಬದಲಿಸಲು ಹೀಗೆ ಮಾಡಿ
ಬರೀ 9-ಸೆಕೆಂಡ್‌ಗಳ ಈ ವಿಡಿಯೋಗೆ 1,28,000+ ವೀಕ್ಷಣೆಗಳು ಸಿಕ್ಕಿದ್ದು, 550ಕ್ಕೂ ಹೆಚ್ಚಿನ ರೀಟ್ವೀಟ್‌ಗಳ ಮೂಲಕ ವ್ಯಾಪಕವಾಗಿದೆ.
“ಪುಟ್ಟ ವಿಷಯಗಳು… ಜೀವನ ಇಷ್ಟು ಸುಂದರವಾಗಿರಬಲ್ಲದು…,” ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
https://twitter.com/i/status/1478083004438401025