ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲೆಲ್ಲೂ ಪಟಾಕಿಯದ್ದೇ ಸದ್ದು, ಪಟಾಕಿ ಹಾರಿಸಲು ಹೆಚ್ಚಿನವರು ತವಕದಲ್ಲಿದ್ದಾರೆ. ಈ ಬಾರಿ ಹಸಿರು ಪಟಾಕಿ ಹಾರಿಸಬೇಕು, ಪ್ರಕೃತಿಗೆ ಹಾನಿ ಮಾಡಬಾರದು ಎಂಬೆಲ್ಲಾ ನಿಯಮಗಳನ್ನು ಜಾರಿ ಮಾಡಲಾಗಿದೆ. ಪಟಾಕಿ ಹೊಡೆಯಲು ಸಮಯವನ್ನೂ ನಿಗದಿ ಮಾಡಲಾಗಿದೆ. ಇದರ ನಡುವೆಯೇ ಪರಿಸರ ಪ್ರಿಯ ಪಟಾಕಿ ಹಾರಿಸುವ ಕುರಿತು ಯುವಕನೊಬ್ಬ ಹೇಳಿದ ಮಾತಿನ ವಿಡಿಯೋ ವೈರಲ್ ಆಗುತ್ತಿದ್ದು, ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರಕರ್ತರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಯುವಕನೊಬ್ಬನಿಗೆ ಈ ಪತ್ರಕರ್ತ ಸಂದರ್ಶನ ಮಾಡಿದ್ದಾರೆ. ಆ ಸಮಯದಲ್ಲಿ ದೀಪಾವಳಿಯನ್ನು ಹೇಗೆ ಆಚರಿಸುತ್ತೀರಿ ಎಂದು ಪತ್ರಕರ್ತ ಕೇಳಿದಾಗ, ಯುವಕ ನಾನು ಪರಿಸರ ಸ್ನೇಹಿ ಪಟಾಕಿ ಆಚರಿಸುತ್ತೇನೆ ಎಂದಿದ್ದಾನೆ. ಅದಕ್ಕೆ ಪತ್ರಕರ್ತ ಅದು ಹೇಗೆ ಪ್ರಶ್ನಿಸಿದಾಗ ಯುವಕ ನೀಡಿರುವ ಉತ್ತರಕ್ಕೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.
ಅಷ್ಟಕ್ಕೂ ಯುವಕ ಹೇಳಿದ್ದೇನೆಂದರೆ, ಹೌದು ನಾನು ಈ ಬಾರಿ ಪರಿಸರ ಸ್ನೇಹಿ ದೀಪಾವಳಿ ಆಚರಿಸುತ್ತೇನೆ. ಅದು ಹೇಗೆ ಎಂದರೆ ನಾನು ಯಾವ ಪಟಾಕಿಯನ್ನೂ ಹಾರಿಸುವುದಿಲ್ಲ ಎಂದಿದ್ದಾನೆ. ಇಷ್ಟು ಹೇಳಿದಾಗ ಆರಂಭದಲ್ಲಿ ಆಹಾ! ಯುವಕ ಪಟಾಕಿಯನ್ನು ತ್ಯಾಗ ಮಾಡಿದ ಎಂದುಕೊಳ್ಳಬೇಕು. ಆದರೆ ಮುಂದುವರೆದ ಈ ಯುವಕ ಹೇಳಿದ್ದೇನೆಂದರೆ, ನಾನು ಪಟಾಕಿಯನ್ನು ಹೊಡೆಯುವುದಿಲ್ಲ, ಬದಲಿಗೆ ಬೇರೆಯವರಿಂದ ಪಟಾಕಿ ಹೊಡೆಸುತ್ತೇನೆ, ಈ ಮೂಲಕ ನಾನು ಪರಿಸರ ಸ್ನೇಹಿ ದೀಪಾವಳಿ ಆಚರಿಸುತ್ತೇನೆ ಎಂದಿದ್ದಾನೆ ಭೂಪ….!
https://youtu.be/A_2g9yef0qw