
ವ್ಯಕ್ತಿಯೊಬ್ಬ ಸಾಕು ನಾಯಿಗೆ ಕಿರುಕುಳ ನೀಡುವ ದೃಶ್ಯವನ್ನು ಇತ್ತೀಚೆಗೆ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ನಾಯಿಯ ಕುತ್ತಿಗೆ ಹಿಡಿದು ಮೇಲಕ್ಕೆತ್ತಿದ್ದಾನೆ. ನಾಯಿ ನೋವಿನಿಂದ ಅರಚಿದ್ರೂ ಆತನ ಮನ ಮಾತ್ರ ಕರಗಿಲ್ಲ. ಇದನ್ನು ನೋಡಿದ ಹಸುವೊಂದು ಕ್ರೋಧಗೊಂಡು ಏಕಾಏಕಿ ಆ ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ಆತನನ್ನು ಕೆಳಗೆ ಬೀಳಿಸಿ ಸರಿಯಾಗಿ ಒದೆ ನೀಡಿದೆ.
ಕುಟುಂಬದಲ್ಲಿ ಯಾರೇ ಸತ್ತರೂ, ಮಹಿಳೆಯ ಉಗುರು ಕಟ್….!
ಕರ್ಮ ಎಂಬ ಶೀರ್ಷಿಕೆಯೊಂದಿಗೆ ನಂದಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 1.29 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಆತನ ತಪ್ಪಿಗೆ ಸರಿಯಾದ ಶಿಕ್ಷೆಯಾಗಿದೆ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.