
ಪ್ರಾಣಿಗಳ ಮೇಲೆ ಹಿಂಸೆ ನಡೆಯುತ್ತಿರುವಾಗ ಅದನ್ನು ತಪ್ಪಿಸಲು ಇನ್ನೊಬ್ಬ ಮಾನವನೇ ಬರಬೇಕು ಎಂದೇನಿಲ್ಲ. ಮತ್ತೊಂದು ಪ್ರಾಣಿಯೇ ಸಾಕು ಎಂಬುದನ್ನ ವೈರಲ್ ವಿಡಿಯೋವೊಂದು ಹೇಳಿದೆ.
ವ್ಯಕ್ತಿಯೊಬ್ಬ ಶ್ವಾನಕ್ಕೆ ಹಿಂಸೆ ನೀಡುತ್ತಿದ್ದ ಅಮಾನವೀಯ ವಿಡಿಯೋವೊಂದನ್ನು ಅರಣ್ಯಾಧಿಕಾರಿ ಸುಸಂತಾ ನಂದಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಇದರಲ್ಲಿ ವ್ಯಕ್ತಿಯೊಬ್ಬ ನಾಯಿಯ ಕುತ್ತಿಗೆಯನ್ನು ಹಿಡಿದು ಮೇಲಕ್ಕೆ ಎತ್ತುತ್ತಿದ್ದಾನೆ.ಇದರಿಂದ ತೀವ್ರತರವಾದ ನೋವನ್ನು ಅನುಭವಿಸುತ್ತಿದ್ದ ಶ್ವಾನವು ಅಳುತ್ತಿರುವ ದೃಶ್ಯ ಕರುಳು ಹಿಂಡುವಂತಿತ್ತು. ಆದರೆ ಈ ವಿಡಿಯೋ ಕೊನೆಯಲ್ಲಿ ಮಾತ್ರ ಭರ್ಜರಿ ಟ್ವಿಸ್ಟ್ ಕಾದಿದೆ..!
ಶ್ವಾನಕ್ಕೆ ಕಿಡಿಗೇಡಿಯ ಹಿಂಸೆ ಕೊಡುವುದನ್ನು ಮುಂದುವರಿಸುತ್ತಲೇ ಇದ್ದನು. ಈ ವೇಳೆ ಎಲ್ಲಿಂದಲೋ ಬಂದ ಹಸುವು ಶ್ವಾನವನ್ನು ಪಕ್ಕಕ್ಕೆ ತಳ್ಳಿದೆ. ಬಳಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಗೆ ಸರಿಯಾಗೆ ಡಿಚ್ಚಿ ಕೊಟ್ಟಿದೆ. ವ್ಯಕ್ತಿಯನ್ನು ನೆಲಕ್ಕೆ ಕೆಡವಿದ ಹಸುವು ಆತನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.