alex Certify ಮದುವೆ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ಕೇರ್​ ಮಾಡದ ವ್ಯಕ್ತಿಯಿಂದ ಕುಣಿತ ಮುಂದುವರಿಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ಕೇರ್​ ಮಾಡದ ವ್ಯಕ್ತಿಯಿಂದ ಕುಣಿತ ಮುಂದುವರಿಕೆ….!

ಮದುವೆ ಸಮಾರಂಭದ ಸಂಭ್ರಮಾಚರಣೆಯ ವೇಳೆ ಕೈಯಲ್ಲಿದ್ದ ಪಟಾಕಿಯಿಂದ ಆಕಸ್ಮಿಕವಾಗಿ ವೇದಿಕೆಗೆ ಬೆಂಕಿ ಇಡುವ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸದೆ ಮದ್ಯದ ಅಮಲಿನಲ್ಲಿ ಅದನ್ನು ಆರಿಸಿ ನೃತ್ಯ ಮುಂದುವರಿಸುವ ಅಚ್ಚರಿಯ ವಿಡಿಯೋ ವೈರಲ್​ ಆಗಿದೆ.

ಮದುವೆ ಸಮಾರಂಭದಲ್ಲಿ ಕೆಲವು ಅತಿಥಿಗಳು ಕೈಯಲ್ಲಿ ಎರಡು ಸ್ಪಾರ್ಕ್ಲ್​ರ್​ಗಳನ್ನು ಹಿಡಿದು ವಾದ್ಯದ ಸದ್ದಿಗೆ ತಕ್ಕಂತೆ ಕುಣಿಯುತ್ತಿರುತ್ತಾರೆ, ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಡ್ಯಾನ್ಸ್​ ಮಾಡುವಾಗ ಆತನ ಕೈಯಲ್ಲಿದ್ದ ಪಟಾಕಿಯಿಂದ ಅಲ್ಲೇ ಪಕ್ಕದಲ್ಲಿದ್ದ ಅಲಂಕಾರಿಕ ಹೂದಾನಿ, ಪರದೆಗೆ ಬೆಂಕಿ ತಗುಲುತ್ತದೆ. ಆತನ ಪರಿಸ್ಥಿತಿ ನೋಡಿದರೆ ಆತ ಸ್ಪಷ್ಟವಾಗಿ ಮದ್ಯಪಾನದ ಅಮಲಿನಲ್ಲಿದ್ದಾನೆಂದೂ ತೋರುತ್ತದೆ.

ಮಹಿಳೆಯೊಬ್ಬರು ಧಾವಿಸಿ ಪರದೆಯನ್ನು ಕೆಡವಿದಾಗ ಬೆಂಕಿ ವೇಗವಾಗಿ ದೊಡ್ಡದಾಯಿತು. ಆದರೆ, ಆ ವ್ಯಕ್ತಿ ತನ್ನ ಕೈಯಿಂದ ಬೆಂಕಿ ತಗುಲಿದ್ದ ಹೂದಾನಿಯಲ್ಲಿದ್ದ ಅಲಂಕಾರಿಕ ವಸ್ತುವನ್ನು ನೆಲಕ್ಕೆ ತಳ್ಳಿ ಅದರ ಮೇಲೆ ಕುಣಿದು ಬೆಂಕಿ ನಂದಿಸುತ್ತಾನೆ.

ಹಾಗೆಯೇ, ಏನೂ ಆಗಿಲ್ಲ ಎಂಬಂತೆ ಆ ವ್ಯಕ್ತಿ ಸಂತೋಷದಿಂದ ಕುಣಿದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನು ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ. ಆ ವ್ಯಕ್ತಿಯು ಗಾಬರಿ ಬೀಳದೆ ಏನೂ ಆಗಿಲ್ಲ ಎಂಬಂತಹ ವರ್ತನೆ ಕೆಲವರಿಗೆ ಖುಷಿಕೊಟ್ಟಿದೆ. ಮತ್ತೆ ಕೆಲವರು ಟೀಕೆ ಮಾಡಿದ್ದಾರೆ.

https://twitter.com/nftbadger/status/1543908667799601153?ref_src=twsrc%5Etfw%7Ctwcamp%5Etweetembed%7Ctwterm%5E1543908667799601153%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-man-dance-with-firecrackers-fire-wedding-shadi-funny-tiktok-twitter-5497260%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...