ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅರಮನೆಯ ಎಲಿಜಬೆತ್ ಟವರ್‌ನ (ಬಿಗ್ ಬೆನ್) ಕೆಳಭಾಗಕ್ಕೆ ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬ ಹತ್ತಿ ಪ್ಯಾಲೆಸ್ತೀನ್ ಧ್ವಜವನ್ನು ಹಾರಿಸಿ ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗಿದ್ದಾನೆ. ಸುಮಾರು 16 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಬಳಿಕ ಭಾನುವಾರ ಆತನನ್ನು ಬಂಧಿಸಲಾಗಿದೆ ಎಂದು ಬ್ರಿಟಿಷ್ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದ ವೆಸ್ಟ್‌ಮಿನ್‌ಸ್ಟರ್ ಸೇತುವೆಯನ್ನು ಮುಚ್ಚಲಾಗಿತ್ತು ಮತ್ತು ಸಂಸತ್ತಿನ ಪ್ರವಾಸಗಳನ್ನು ರದ್ದುಗೊಳಿಸಲಾಗಿತ್ತು. ತುರ್ತು ಸಿಬ್ಬಂದಿಗಳು ಕ್ರೇನ್ ಬಳಸಿ ಆತನೊಂದಿಗೆ ಮಾತುಕತೆ ನಡೆಸಿದ್ದು, ಆತ ತನ್ನದೇ ಆದ ನಿಯಮಗಳ ಮೇಲೆ ಕೆಳಗಿಳಿಯುವುದಾಗಿ ಹೇಳಿದನು.
ಈ ಘಟನೆಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಆತನ ಸುರಕ್ಷತೆಗಾಗಿ ಪ್ರಾರ್ಥಿಸಿದರೆ, ಮತ್ತೆ ಕೆಲವರು ಆತ ಕೆಳಗೆ ಬೀಳಲಿ ಎಂದು ಬಯಸಿದ್ದಾರೆ. ಇದಕ್ಕೂ ಮೊದಲು 2019ರಲ್ಲಿ ಎಕ್ಸ್‌ಟಿಂಕ್ಷನ್ ರೆಬೆಲಿಯನ್ ಕಾರ್ಯಕರ್ತರೊಬ್ಬರು ಮತ್ತು ಬೆನ್ ಅಟ್ಕಿನ್ಸನ್ ಎಂಬುವರು ಬಿಗ್ ಬೆನ್‌ನ ಮೇಲೆ ಹತ್ತಿ ಪ್ರತಿಭಟನೆ ನಡೆಸಿದ್ದರು.
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಕಾಟ್ಲೆಂಡ್‌ನ ಟರ್ನ್‌ಬೆರಿ ಗಾಲ್ಫ್ ರೆಸಾರ್ಟ್ ಮೇಲೆ ಪ್ಯಾಲೆಸ್ತೀನ್ ಪರ ಕಾರ್ಯಕರ್ತರು ದಾಳಿ ನಡೆಸಿ ‘ಗಾಜಾ ಮಾರಾಟಕ್ಕಿಲ್ಲ’ ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Man climbs up BIG BEN in London ….. Livestreams it… 😳
He has been Yelling “Free Palestine” since 7:24 am UK 🇬🇧 Time pic.twitter.com/q9iTLr3fcN
— Culture War Report (@CultureWar2020) March 8, 2025
🇬🇧 UK Big Ben in London – man holding a Palestinian flag climbed up the tower housing the famous clock and bell
He’s been up there since around 7.24 am
He told viewers on a livestream that he has ‘got supplies’ to stay up there for ‘some time’ pic.twitter.com/d8n5W2c0S4
— Culture War Report (@CultureWar2020) March 8, 2025