ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ಮೈ ಬೆವರೋದ್ರಲ್ಲಿ ಸಂಶಯವಿಲ್ಲ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಹಂಚಿಕೊಳ್ಳಲಾಗಿದ್ದು, ಪ್ರೇತ ನಾಯಿಯ ಜೊತೆ ಸಾಕು ನಾಯಿಯೊಂದು ಆಟವಾಡುತ್ತಿದೆ. ಈ ವಿಡಿಯೋವನ್ನು ನಾಯಿಯ ಮಾಲೀಕ ಹಂಚಿಕೊಂಡಿದ್ದಾನೆ.
ಆಸ್ಟ್ರೇಲಿಯಾದ ಜೇಕ್ ಡಿಮಾರ್ಕೊ ಎಂಬಾತ ತನ್ನ ಮುದ್ದಿನ ನಾಯಿ ರೈಡರ್ ಮೆಲ್ಬೋರ್ನ್‌ನಲ್ಲಿರುವ ತನ್ನ ಮನೆಯ ಹಿತ್ತಲಿನಲ್ಲಿ ದೆವ್ವವಾಗಿರುವ ನಾಯಿಯೊಂದಿಗೆ ಆಟವಾಡುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಸಿ ಟಿವಿ ಫೂಟೇಜ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ.
ಅಂಧ ಬಾಲಕನ ರಾಜ್ಯ ಗೀತೆಗೆ ಮನಸೋತ ಛತ್ತೀಸ್ ಗಢ ಸಿಎಂ…!
ಈ ವಿಡಿಯೋವನ್ನು ಕ್ಯಾಟರ್ಸ್ ನ್ಯೂಸ್ ಏಜೆನ್ಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದು, 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. 31 ಸೆಕೆಂಡುಗಳ ವಿಡಿಯೋದಲ್ಲಿ ಜೇಕ್‌ನ ಸಾಕು ನಾಯಿ ರೈಡರ್ ಹಿತ್ತಲಿನಲ್ಲಿ ಬಿಳಿ ನಾಯಿಯೊಂದನ್ನು ಅಟ್ಟಿಸಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಕೆಲವು ಕ್ಷಣಗಳ ನಂತರ, ಪ್ರೇತ ನಾಯಿ ಅಲ್ಲಿಂದ ಕಣ್ಮರೆಯಾಗುತ್ತದೆ.
ಸಿಸಿಟಿವಿ ಫೂಟೇಜ್ ನೋಡಿದಾಗ ದಿಗ್ಭ್ರಮೆಗೊಂಡಿರುವುದಾಗಿ ಜೇಕ್ ಹೇಳಿದ್ದಾರೆ. ಜೇಕ್ ಬೆಚ್ಚಿಬೀಳಲು ಮುಖ್ಯ ಕಾರಣವೆಂದರೆ ಹಿತ್ತಲನ್ನು ಎತ್ತರದ ಬೇಲಿಯಿಂದ ಲಾಕ್ ಮಾಡಲಾಗಿದೆ ಮತ್ತು ಯಾವುದೇ ನಾಯಿ ಅದರ ಮೇಲೆ ಹಾರುವುದು ಅಸಾಧ್ಯವೆಂದು ಅವರ ಅಂಬೋಣ. ಸಿಸಿಟಿವಿ ದೃಶ್ಯಾವಳಿ ಗಮನಿಸಿದ ಜೇಕ್ ಕೂಡಲೇ ಹೊರಗೆ ಓಡಿದ್ದಾನೆ. ಈ ವೇಳೆ ಬಿಳಿ ಬಣ್ಣದ ನಾಯಿ ಅಲ್ಲಿಂದ ಕಣ್ಮರೆಯಾಗಿದೆ ಎಂದು ಹೇಳಿದ್ದಾನೆ
ಆದರೆ, ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಇದನ್ನು ದೆವ್ವ ಎಂದು ನಂಬಿಲ್ಲ. ಶ್ವಾನದ ಮಾಲೀಕ ಸುಖಾಸುಮ್ಮನೆ ಸುಳ್ಳು ಹೇಳುತ್ತಿದ್ದಾನೆ ಎಂದು ದೂರಿದ್ದಾರೆ.