ಗ್ರೆಗೊರಿ ಫೋಸ್ಟರ್ ಎಂಬಾತ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮೆಣಸಿನ ಕಾಯಿ ತಿನ್ನುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಗ್ರೆಗೊರಿ 110.50 ಗ್ರಾಂ (3.98 ಔನ್ಸ್) – ಅಥವಾ 17- ಅತ್ಯಂತ ಹಾಟ್ ಮೆಣಸಿನ ಕಾಯಿ ತಿನ್ನುವ ಮೂಲಕ ಹಳೆಯ ದಾಖಲೆಯನ್ನು ಮುರಿಯಲು ಯಶಸ್ವಿಯಾದರು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಗ್ರೆಗೊರಿ ದಾಖಲೆಯನ್ನು ಮುರಿಯುವುದನ್ನು ತೋರಿಸುವ ವಿಡಿಯೊವನ್ನು ಪೋಸ್ಟ್ ಮಾಡಿದೆ.
ಈ ಉತ್ಸಾಹಿಯು 14 ನವೆಂಬರ್ 2021ರಂದು ಸವಾಲನ್ನು ಸ್ವೀಕರಿಸಿದರು, ಒಂದು ನಿಮಿಷದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ತಿನ್ನುವ ದಾಖಲೆಯನ್ನು ಪ್ರಯತ್ನಿಸಿದ್ದರು. ಸ್ಯಾನ್ ಡಿಯಾಗೋ, ಕ್ಯಾಲಿಫೋನಿರ್ಯಾದ ಸಾರ್ವಜನಿಕ ಉದ್ಯಾನವನದಲ್ಲಿ ದಾಖಲೆ ಮಾಡಲು ಪ್ರಯತ್ನಿಸಿದ್ದರು.
ಗ್ರೆಗೊರಿ ಇತರ ಎರಡು ದಾಖಲೆಗಳನ್ನು ಹೊಂದಿದ್ದಾರೆ. ಈ ವಿಡಿಯೋದಲ್ಲಿ ಒಂದಾದರ ಮೇಲೊಂದರಂತೆ ಸಿಹಿ ತಿಂಡಿ ತಿಂದಂತೆ ಮೆಣಸಿನ ಕಾಯಿ ತಿನ್ನುತ್ತಾ ಹೋಗಿದ್ದಾರೆ. ಖಾರದ ಅನುಭವವನ್ನು ಪರಿಗಣಿಸಿದೇ ದಾಖಲೆಯ ಗುರಿಯತ್ತ ಅವರು ದೃಷ್ಟಿ ನೆಟ್ಟಿದ್ದರು. ಇನ್ನೂ 3&4 ಮೆಣಸಿನ ಕಾಯಿ ಬಾಕಿ ಉಳಿದಿದ್ದಾಗ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಆದರೆ, ಅಷ್ಟರಲ್ಲಿ ಅವರ ದಾಖಲೆಯ ಗುರಿ ತಲುಪಿಯಾಗಿತ್ತು.
ಗ್ರೆಗೊರಿ ಯಾವಾಗಲೂ ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ ಮತ್ತು ಮನೆಯಲ್ಲಿ ಮೆಣಸು ಬೆಳೆಯುತ್ತಾರೆ. ಅವರು ಮಸಾಲೆಯುಕ್ತ ಆಹಾರ ಸೇವಿಸುತ್ತಾ, ಅದರ ಮಟ್ಟವನ್ನು ದಶಕಗಳಿಂದ ಹೆಚ್ಚಿಸಿಕೊಂಡು ಬಂದಿದ್ದಾರೆ. ಈಗ ವಿಶ್ವದ ಅತ್ಯಂತ ಹಾಟ್ ಮೆಣಸುಗಳನ್ನು ಹೊಟ್ಟೆಗಿಳಿಸಲು ಸಮರ್ಥರಾಗಿದ್ದಾರೆ.