ಸಮುದ್ರ ತೀರದಲ್ಲಿ ವಿಶ್ರಾಂತಿ ಮಾಡುತ್ತಿದ್ದ ಜನರ ಗುಂಪಿಗೆ ಹಾವೊಂದು ಕಾಣಿಸಿಕೊಂಡು ಭೀತಿ ಸೃಷ್ಟಿಸಿದೆ. ಈ ವೇಳೆ ಅದೃಷ್ಟವಶಾತ್ ಅವರನ್ನು ರಕ್ಷಿಸಲು ಒಬ್ಬ ವ್ಯಕ್ತಿ ಅಲ್ಲಿ ಹಾಜರಾಗಿದ್ದಾನೆ.
ಈ ವಿಡಿಯೊವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ ಉದ್ದೇಶವಲ್ಲ, ಆದರೆ ಗುರಿಯೂ ಸರಿಯಾಗಿರಬೇಕು ಎಂದು ಶೀರ್ಷಿಕೆ ನೀಡಿದ್ದು, ಸಾವಿರಾರು ವೀಕ್ಷಣೆ ಕಂಡಿದೆ. ಕೆಲವರು ಆಸಕ್ತಿಕರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಆ ಕ್ಲಿಪ್ನಲ್ಲಿ, ಒಬ್ಬ ವ್ಯಕ್ತಿಯು ತನ್ನ ಸ್ನೇಹಿತರೊಂದಿಗೆ ಆಳವಿಲ್ಲದ ನೀರಿನಲ್ಲಿ ನಿಂತಿರುವಾಗ ಹಾವು ಅವರ ಕಡೆಗೆ ಬರುವುದು ಕಾಣಿಸುತ್ತದೆ. ತಾನು ಹಾವುಗಳಿಗೆ ಹೆದರುವುದಿಲ್ಲ ಎಂದು ಎಲ್ಲರಿಗೂ ತೋರಿಸಲು ಆತ ಪ್ರಯತ್ನಿಸುತ್ತಾನೆ ಮತ್ತು ಅದರ ಬಾಲ ಹಿಡಿದು ಅದನ್ನು ಎತ್ತಿಕೊಳ್ಳುತ್ತಾನೆ.
ಹಾವನ್ನು ಕಡಲತೀರದಿಂದ ದೂರ ಎಸೆಯುವ ಉದ್ದೇಶದಿಂದ, ಆತ ತನ್ನ ತೋಳನ್ನು ಬೀಸಿ ಎಸೆದಿದ್ದಾನೆ. ಆದರೆ, ಅದು ನೀರಲ್ಲಿ ತೇಲುವ ಹಾಸಿಗೆಯ ಮೇಲೆ ಬಂದು ಬೀಳುತ್ತದೆ, ಅದರ ಮೇಲೆ ಕೆಲವರು ವಿಶ್ರಾಂತಿ ಪಡೆಯುತ್ತಿದ್ದವರು ಗಾಬರಿ ಬಿದ್ದು ನೀರಿಗೆ ಹಾರುವಂತಾಗುತ್ತದೆ.
ಈ ಘಟನೆಯಲ್ಲಿ ಸ್ಪಷ್ಟವಾಗಿ, ಹಾವು ಹಿಡಿದ ಉದ್ದೇಶ ಒಳ್ಳೆಯದಿತ್ತು, ಆದರೆ ಅವನ ಗುರಿ ಭಯಾನಕವಾಗಿತ್ತು ಎಂದು ಹೇಳಬಹುದು.
ಇದನ್ನು ವೀಸಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ. “ಐಸೆ ದೋಸ್ತೋನ್ ಕಾ ಹೋನಾ ಜೀವನ್ ಮೆ ಬಹುತ್ ಜರೂರಿ ಹೈ’ ಎಂದು ಒಬ್ಬರು ಸ್ವಾರಸ್ಯಕರವಾಗಿ ಕಾಮೆಂಟ್ ಮಾಡಿದ್ದಾರೆ.