ಪರರ ಬಗ್ಗೆ ತೋರುವ ಕರುಣೆ, ದಯೆ, ಸಹಾಯದ ಕಾರ್ಯಗಳು ಸರ್ವಕಾಲಕ್ಕೂ ಗಮನ ಸೆಳೆಯುತ್ತವೆ. ನಿರ್ಗತಿಕರಿಗೆ ನೆರವಾಗುವ, ಕಷ್ಟದಲ್ಲಿದ್ದವರ ಮೊಗದಲ್ಲಿ ನಗು ತರಿಸುವ ಕೆಲಸಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸುತ್ತವೆ. ಅಂತದ್ದೊಂದು ಕಾರ್ಯದಲ್ಲಿ ಗಮನ ಸೆಳೆದಿರುವ ವ್ಯಕ್ತಿ ರಸ್ತೆ ಬದಿಯಲ್ಲಿ ಹಣ್ಣು ಮಾರುತ್ತಿದ್ದ ವೃದ್ಧೆಗೆ ನೆರವಾಗಿದ್ದಾರೆ.
ಪಂಜಾಬ್‌ನ ಲೂಧಿಯಾನದ ವ್ಯಕ್ತಿಯೊಬ್ಬರು ವೃದ್ಧ ಮಹಿಳೆಯೊಬ್ಬರ ಉತ್ಸಾಹವನ್ನು ಹೆಚ್ಚಿಸಲು ಅವರು ಮಾರುತ್ತಿದ್ದ ಎಲ್ಲಾ ಹಣ್ಣುಗಳನ್ನು ಖರೀದಿಸಿದ್ದಾರೆ. ಈ ವೀಡಿಯೊ ವೈರಲ್ ಆಗಿದೆ.
ಮನೆಗೆ ಹಿಂದಿರುಗುತ್ತಿದ್ದ ವೇಳೆ ವ್ಯಾಪಾರ ಸಲಹೆಗಾರ ಮತ್ತು ಲುಧಿಯಾನ ಲೈವ್‌ನ ಸಂಸ್ಥಾಪಕ ಕವಾಲ್ ಛಾಬ್ರಾ ಅವರು ಗಾಡಿಯಲ್ಲಿ ಹಣ್ಣುಗಳನ್ನು ಮಾರುತ್ತಿದ್ದ ವೃದ್ಧೆಯನ್ನ ಗಮನಿಸಿದರು. ಹಣ್ಣುಗಳ ಬೆಲೆಯನ್ನು ವಿಚಾರಿಸುತ್ತಾ ವೃದ್ಧೆಯೊಂದಿಗೆ ಮಾತಿಗಿಳಿದಾಗ 62 ವರ್ಷದ ವೃದ್ಧೆ ತಾನು ಮೂರು ವರ್ಷಗಳಿಂದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು, ಪ್ರತಿದಿನ 12 ಗಂಟೆಗಳ ಕಾಲ ಸ್ಟಾಲ್‌ನಲ್ಲಿ ಕಳೆಯುತ್ತೇನೆ ಎಂಬ ಮಾಹಿತಿ ಹಂಚಿಕೊಂಡರು.
ಆಕೆಯ ದೈನಂದಿನ ಗಳಿಕೆಯ ಬಗ್ಗೆ ಕೇಳಿದಾಗ, ದಿನಕ್ಕೆ 100 ರೂ.ನಂತೆ ಗಳಿಸುವುದಾಗಿ ವೃದ್ಧೆ ಹೇಳಿದರು. ಈ ವೇಳೆ ವಯಸ್ಸಾದ ಮಹಿಳೆಗೆ ಸಹಾಯ ಮಾಡಲು ಕವಾಲ್ ಛಾಬ್ರಾ ಅವರು ವೃದ್ಧೆಯ ಬಳಿಯಿದ್ದ 3,000 ರೂಪಾಯಿ ಮೌಲ್ಯದ ಸಂಪೂರ್ಣ ಹಣ್ಣುಗಳನ್ನು ಖರೀದಿಸಿದರು.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವೀಡಿಯೊ 5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅವರ ನಡೆ ಸಾಮಾಜಿಕ ಮಾಧ್ಯಮ ಬಳಕೆದಾರರ ಮೆಚ್ಚುಗೆ ಗಳಿಸಿದೆ.
ಇದೇ ಕವಾಲ್ ಛಾಬ್ರಾ ಮತ್ತೊಂದೆಡೆ ವೃದ್ಧರೊಬ್ಬರು ಮಾರುತ್ತಿದ್ದ ಗೃಹೋಪಯೋಗಿ ವಸ್ತುಗಳನ್ನೆಲ್ಲಾ ಕೊಂಡುಕೊಂಡು ಅವರಿಗೂ ನೆರವಾಗಿದ್ದಾರೆ. ಈ ವೀಡಿಯೊ 4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ .
https://www.youtube.com/shorts/yy0xtuwSvFg?feature=share