ದೋಸೆ ಹಾಕುವುದರಲ್ಲೂ ಕಲೆ ಪ್ರದರ್ಶನ; ವೈರಲ್ ವಿಡಿಯೋ ಲಕ್ಷಾಂತರ ಮಂದಿಯಿಂದ ವೀಕ್ಷಣೆ 04-03-2023 2:04PM IST / No Comments / Posted In: Latest News, India, Live News, Recipies, Life Style ಅಡುಗೆ ತಯಾರಿಯಲ್ಲೂ ಕೆಲವರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಸಾಮಾನ್ಯ ಕೆಲಸದಲ್ಲೂ ಅಸಾಮಾನ್ಯ ಕಲಾ ಪ್ರದರ್ಶನ ತೋರಿರುವ ವಿಡಿಯೋವೊಂದನ್ನ ಅರಕು ಕಾಫಿಯ ಸಹ-ಸಂಸ್ಥಾಪಕರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮುಂಬೈನ ರಸ್ತೆ ಬದಿಯೊಂದರಲ್ಲಿ ದೋಸೆ ಹಾಕುವ ಬಾಣಸಿಗರೊಬ್ಬರು ಸ್ಮೈಲಿ ಶೇಪ್ ನಲ್ಲಿ ದೋಸೆ ಹೊಯ್ದು ಗ್ರಾಹಕರಿಗೆ ನೀಡುತ್ತಿದ್ದಾರೆ. ತಮ್ಮ ಕಾರ್ಯದಲ್ಲೂ ಕಲೆ ಪ್ರದರ್ಶಿಸಿರುವ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಹಂಚಿಕೊಂಡಿರುವ ಅರಕು ಕಾಫಿಯ ಸಹ ಸಂಸ್ಥಾಪಕರು “ಭಾರತದ ಬೀದಿಬದಿ ಆಹಾರ ಮಾರಾಟಗಾರರು ಅತ್ಯಂತ ನವೀನ, ಸ್ಥಿತಿಸ್ಥಾಪಕ ಮತ್ತು ಪರಿಣಾಮಕಾರಿ ಆಹಾರ ಪ್ರಭಾವಿಗಳು ಎಂದು ನಾನು ನಂಬುತ್ತೇನೆ. ಯಾವುದೇ ಗೌರ್ಮೆಟ್ ಬಾಣಸಿಗರಿಗಿಂತಲೂ ಹೆಚ್ಚು. ಹೇಗೆ ಎಂದು ಆಶ್ಚರ್ಯ ಪಡುತ್ತಿದ್ದೇನೆ. ಪೌಷ್ಟಿಕ ಆಹಾರ ವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ಅವರೊಂದಿಗೆ ಕೆಲಸ ಮಾಡಿ. ದಯವಿಟ್ಟು ಈ ವ್ಯಕ್ತಿಯ ಕಲಾತ್ಮಕ ಕೌಶಲ್ಯಗಳನ್ನು ಶ್ಲಾಘಿಸಿ. ” ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನ ಆನ್ಲೈನ್ನಲ್ಲಿ ಹಂಚಿಕೊಂಡ ನಂತರ ಭಾರೀ ವೈರಲ್ ಆಗಿದೆ. ಮುಂಬೈನ ಕಂಡಿವಲಿಯ ಬೀದಿಬದಿ ವ್ಯಾಪಾರಿಯೊಬ್ಬರು ಈ ರೀತಿ ದೋಸೆ ಮಾಡಿರೋದು ಗೊತ್ತಾಗಿದೆ. I believe India’s street food vendors are the most innovative, resilient and impactful food influencers. More than any gourmet chef. Been wondering how to work with them to influence a nutritive food system. Please applaud this guy’s artistic skills. #StreetFood #Arakunomics pic.twitter.com/h7Bvrs5TTJ — Manoj Kumar (@manoj_naandi) March 3, 2023