ತಮಿಳುನಾಡಿನ ವ್ಯಕ್ತಿಯೊಬ್ಬರು ತನ್ನ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ನಾಯಿ ಇಹಲೋಕ ತ್ಯಜಿಸಿದ್ದರಿಂದ ಅದರ ನೆನಪಿಗಾಗಿ ದೇವಸ್ಥಾನಕಟ್ಟಿ ನಾಯಿಯ ಪ್ರತಿಮೆ ಸ್ಥಾಪಿಸಿ ಗಮನ ಸೆಳೆದಿದ್ದಾರೆ.
ಶಿವಗಂಗಾದ ಮುತ್ತು ಎಂಬುವರು ನಿವೃತ್ತ ಸರ್ಕಾರಿ ನೌಕರರಾಗಿದ್ದು, ಲ್ಯಾಬ್ರಡಾರ್ ತಳಿಯ ಟಾಮ್ ಹೆಸರಿನ ನಾಯಿ ಅವರೊಂದಿಗೆ ಹನ್ನೊಂದು ವರ್ಷವಿತ್ತು. ಕಳೆದ ವರ್ಷ ಅದು ಮೃತಪಟ್ಟಿತು.
ನಗು ತರಿಸುತ್ತೆ ದೇಗುಲದಲ್ಲಿ ಕಳ್ಳತನ ಮಾಡಲು ಹೋದವನು ಸಿಕ್ಕಿಬಿದ್ದ ರೀತಿ
ಇದರ ಸವಿನೆನಪಿಗಾಗಿ ಮುತ್ತು ತಮ್ಮ ಕೃಷಿ ಭೂಮಿಯಲ್ಲಿ ಉಳಿತಾಯದ ಹಣ ಎಂಬತ್ತು ಸಾವಿರ ರೂಪಾಯಿ ಖರ್ಚು ಮಾಡಿ ಪ್ರತಿಮೆ ಮಾಡಿಸಿ ಗುಡಿಯಲ್ಲಿ ಸ್ಥಾಪಿಸಿದ್ದಾರೆ.
ಮುತ್ತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 2010ರಿಂದ ಟಾಮ್ ಜೊತೆಯಲ್ಲಿತ್ತು. ಮಗುವಿನಂತೆ ನೋಡಿಕೊಂಡಿದ್ದೆ, 2021ರಲ್ಲಿ ಅದು ಅನಾರೋಗ್ಯದಿಂದ ಬಿಟ್ಟುಹೋಯಿತು. ಹೀಗಾಗಿ ಅದರ ನೆನಪಲ್ಲಿ ಪ್ರತಿಮೆ ಸ್ಥಾಪಿಸಿದ್ದಾಗಿ ತಿಳಿಸಿದ್ದಾರೆ.