alex Certify ರೈಲು ಸೇತುವೆ ಮೇಲಿದ್ದಾಗಲೇ ಎಮರ್ಜೆನ್ಸಿ ಚೈನ್‌ ಎಳೆದ ಪ್ರಯಾಣಿಕ….! ಸರಿಪಡಿಸಲು ಜೀವವನ್ನೇ ಪಣಕ್ಕಿಟ್ಟ ಲೋಕೋ ಪೈಲಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಸೇತುವೆ ಮೇಲಿದ್ದಾಗಲೇ ಎಮರ್ಜೆನ್ಸಿ ಚೈನ್‌ ಎಳೆದ ಪ್ರಯಾಣಿಕ….! ಸರಿಪಡಿಸಲು ಜೀವವನ್ನೇ ಪಣಕ್ಕಿಟ್ಟ ಲೋಕೋ ಪೈಲಟ್

ಮುಂಬೈನ ಕಲ್ಯಾಣ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ರೈಲು ಛಾಪ್ರಾ ಸಮೀಪ ಇದ್ದಾಗ ಟಿಟ್ವಾಲಾ ಮತ್ತು ಖಡವಲಿ ನಡುವಿನ ನದಿಯ ಸೇತುವೆ ಮೇಲಿದ್ದಾಗ ಪ್ರಯಾಣಿಕರೊಬ್ಬರು ಎಮರ್ಜೆನ್ಸಿ ಚೈನ್‌ ಎಳೆದುಬಿಟ್ಟರು.

ತುರ್ತು ಅಪಾಯವೆಂದು ಭಾವಿಸಿದ ಲೋಕೋಪೈಲಟ್‌ ರೈಲು ಚಲಿಸುವುದನ್ನು ತಡೆಯಲು ತುರ್ತು ಬ್ರೇಕ್‌ ಹಾಕಿದ್ದಾರೆ. ಈ ರೀತಿ ಎಮರ್ಜೆನ್ಸಿ ಚೈನ್‌ ಎಳೆದ ಕಾರಣ, ರೈಲು ಮತ್ತೆ ಸಂಚರಿಸಲು ಸಹಾಯಕ ಲೋಕೋ ಪೈಲಟ್‌ ತಮ್ಮ ಜೀವವನ್ನೇ ಪಣಕ್ಕಿಡಬೇಕಾಗಿ ಬಂತು !

ಈ ಸೇತುವೆಯಲ್ಲಿ ಒಂದೇ ರೈಲು ಹಳಿ ಇದ್ದ ಕಾರಣ ರೈಲು ಸಂಚಾರಕ್ಕೂ ಕೆಲಕಾಲ ಅಡಚಣೆ ಉಂಟಾಯಿತು. ಎಮರ್ಜೆನ್ಸಿ ಚೈನ್‌ ಎಳೆದವರು ಯಾರು ? ಯಾಕೆ ಎಂದು ಅನ್ವೇಷಿಸಿದಾಗ ಅನಗತ್ಯವಾಗಿ ಕೆಲವು ಪ್ರಯಾಣಿಕರು ಈ ರೀತಿ ಮಾಡಿರುವುದು ರೈಲ್ವೆ ಸಿಬ್ಬಂದಿ ಗಮನಕ್ಕೆ ಬಂದಿದೆ. ಮುಂಬೈನಿಂದ 80 ಕಿ.ಮೀ ದೂರದಲ್ಲಿ ನಡೆದ ಘಟನೆಯ ವಿಡಿಯೋವನ್ನು ರೈಲ್ವೆ ಸಚಿವಾಲಯ ಗುರುವಾರ ತನ್ನ ಟ್ವೀಟ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ತಲೆ ತಿರುಗಿಸುವಂತಿದೆ ಟೊಮೆಟೊ ಬೆಲೆ, ಶತಕ ದಾಟಿದ ಚಿಲ್ಲರೆ ದರ, ಹೋಲ್ಸೇಲ್ ದರ 15 ಕೆಜಿಗೆ 1080 ರೂ.

ಈ ವೈರಲ್‌ ವಿಡಿಯೋದಲ್ಲಿ, ಛಾಪ್ರಾ ಕಡೆಗೆ ಹೋಗುತ್ತಿದ್ದ ಗೋದಾನ್ ಎಕ್ಸ್‌ಪ್ರೆಸ್‌ನ ಹಿರಿಯ ಸಹಾಯಕ ಲೋಕೋ ಪೈಲಟ್ ಸತೀಶ್ ಕುಮಾರ್, ರೈಲಿನ ಕೆಳಗೆ ತೆವಳುತ್ತಿರುವುದನ್ನು ಕಾಣಬಹುದು. ರೈಲು ನದಿ ಸೇತುವೆಯ ಮೇಲೆ ನಿಂತ ಕಾರಣ, ಚಕ್ರ ಮತ್ತು ಇತರ ಅಂಡರ್‌ಬೆಲ್ಲಿ ಉಪಕರಣಗಳ ನಡುವಿನ ಕಿರಿದಾದ ಅಂತರದಲ್ಲಿ ಎಮರ್ಜೆನ್ಸಿ ಬಟನ್‌ ಅನ್ನು ಮರುಹೊಂದಿಸಲು ಹರಸಾಹಸ ಪಡಬೇಕಾಗಿ ಬಂದದ್ದು ಗೋಚರಿಸುತ್ತಿದೆ.

ಈ ವಿಡಿಯೋದ ಜತೆಗೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು, ಅನಗತ್ಯವಾಗಿ ರೈಲುಗಳಲ್ಲಿ ಎಮರ್ಜೆನ್ಸಿ ಚೈನ್‌ ಎಳೆಯಬೇಡಿ ಎಂದು ಮನವಿ ಮಾಡಿದೆ.

ಈ ವಿಡಿಯೋ ಟ್ವೀಟ್‌ ಪೋಸ್ಟ್‌ ಮಾಡಿದ ಕೆಲವೇ ಹೊತ್ತಿನಲ್ಲಿ ವೈರಲ್‌ ಆಗಿದೆ. ಅಪ್ಲೋಡ್‌ ಮಾಡಿದ ಐದೇ ಗಂಟೆಯಲ್ಲಿ 17,500 ಸಾವಿರ ಜನ ವೀಕ್ಷಿಸಿ, 1,000ಕ್ಕೂ ಹೆಚ್ಚು ಜನ ಲೈಕ್‌ ಮಾಡಿದ್ದಾರೆ. 250ಕ್ಕೂ ಹೆಚ್ಚು ಸಲ ರೀಟ್ವೀಟ್‌ ಆಗಿತ್ತು. ಶನಿವಾರ ಬೆಳಗ್ಗೆ 1,500 ಕ್ಕೂ ಹೆಚ್ಚು ಲೈಕ್‌, 377 ರೀಟ್ವೀಟ್‌, 29,500 ರಷ್ಟು ವೀಕ್ಷಣೆ ದಾಖಲಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...