
ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಪದಗಳಲ್ಲಿ ಹೇಳಲು ಅಸಾಧ್ಯ. ಈ ಬಾಂಧವ್ಯ ಸಾರುವ ಅನೇಕ ವಿಡಿಯೋ ಜಾಲತಾಣದಲ್ಲಿ ಸಿಗಲಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಮಂಚದ ಮೇಲೆ ಮಲಗಿರುವಾಗ ತನ್ನ ತಂದೆಗೆ ಮೇಕಪ್ ಮಾಡುತ್ತಿರುವುದನ್ನು ಕಾಣಬಹುದು. ಆಕೆಯ ಚಟುವಟಿಕೆ, ಉತ್ಸಾಹವು ನೆಟ್ಟಿಗರನ್ನು ಖುಷಿಪಡಿಸುವುದು ಪಕ್ಕಾ.
ವಿಡಿಯೋ ಚಿತ್ರೀಕರಣ ಮಾಡುತ್ತಿರುವ ತನ್ನ ತಾಯಿಗೆ “ನಾನು ಅಪ್ಪನಿಗೆ ಮೇಕಪ್ ಮಾಡುತ್ತಿದ್ದೇನೆ” ಎಂದು ಪುಟ್ಟ ಹುಡುಗಿ ಹೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
ಕಪ್ಪು ಬಣ್ಣದ ಟಾಪ್ ಮತ್ತು ಗುಲಾಬಿ ಬಣ್ಣದ ಉಡುಪು ಧರಿಸಿರುವ ಅಂಬೆಗಾಲಿಡುವ ಮಗು ಅಪ್ಪನೊಂದಿಗೆ ತನ್ನ ಸಮಯವನ್ನು ಆನಂದಿಸುತ್ತಿರುವಂತೆ ತೋರುತ್ತಿದೆ. ತಮ್ಮ ಮಗಳು ಈಗಾಗಲೇ ತನ್ನ ಕಣ್ಣುಗಳಿಗೆ ಗ್ಲಿಟರ್ ಐ ಶ್ಯಾಡೋವನ್ನು ಹಾಕಿದ್ದಾಳೆ ಎಂದು ತಂದೆ ತಿಳಿಸುತ್ತಾರೆ.
ವೀಡಿಯೊವನ್ನು ಇನ್ ಸ್ಟಾದ “thesafillesquad” ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆ ಪೇಜ್ 18.7ಕೆ ಫಾಲೋಯರ್ ಹೊಂದಿದೆ. ಈ ವೀಡಿಯೊ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಪಡೆದಿದ್ದು, ನೂರಾರು ಮಂದಿ ಖುಷಿಯಾಗಿ ಕಾಮೆಂಟ್ ಮಾಡಿದ್ದಾರೆ.