ಇಂಟರ್ನೆಟ್ ಸೆಲೆಬ್ರಿಟಿಗಳಾದ ಪ್ಯಾಬ್ಲೋ ಮತ್ತು ಅವರ ಮಗಳು ವೆರೋನಿಕಾ ಮತ್ತೊಂದು ಅದ್ಭುತ ನೃತ್ಯ ವಿಡಿಯೋದೊಂದಿಗೆ ಮರಳಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ರೂ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋದಲ್ಲಿ, ಅವರು ಬೀ ಗೀಸ್‌ನ ಹಿಟ್ ಕ್ಲಾಸಿಕ್ ಹಾಡು ಸ್ಟೇಯಿನ್ ಅಲೈವ್‌ನಲ್ಲಿ ಪ್ರದರ್ಶನ ನೀಡುತ್ತಿರುವ ರೆಟ್ರೊ ಡಿಸ್ಕೋ ಉಡುಪುಗಳನ್ನು ಧರಿಸಿದ್ದಾರೆ. ವೆರೋನಿಕಾ ಕೆಂಪು ಶರ್ಟ್ ಮತ್ತು ಕೆಂಪು ಬೆಲ್-ಬಾಟಮ್ ಪ್ಯಾಂಟ್ ಧರಿಸಿದ್ದರೆ, ಆಕೆಯ ತಂದೆ ಪ್ಯಾಬ್ಲೋ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಮಿಂಚಿದ್ದಾರೆ. ಹಾಡಿಗೆ ಬಹಳ ಸಮನ್ವಯದಿಂದ ತಂದೆ-ಮಗಳು ಕುಣಿದಿದ್ದು, ಮುದ್ದಾಗಿ ಕಾಣುತ್ತಾರೆ. ಅವರು ಧರಿಸಿರುವ ಕನ್ನಡಕವು ಅವರ ಮುದ್ದಾದ ರೆಟ್ರೊ ನೋಟಕ್ಕೆ ಮತ್ತಷ್ಟು ಲುಕ್ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋ ವೈರಲ್ ಆಗಿದ್ದು, 6,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅಪ್ಪ-ಮಗಳು ಜೋಡಿಯ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಬಳಕೆದಾರರು ಹೃದಯದ ಎಮೋಜಿಗಳೊಂದಿಗೆ ಕಮೆಂಟ್‌ಗಳನ್ನು ತುಂಬಿದ್ದಾರೆ. ಅಲ್ಲದೆ ತಂದೆ-ಮಗಳು ಬಹಳ ಮುದ್ದಾಗಿ ಕಾಣುತ್ತಾರೆ ಎಂದು ಪ್ರಶಂಸಿಸಿದ್ದಾರೆ.
https://www.youtube.com/watch?v=sHDkx6anlOM