ರೀಲ್ಸ್ ಇಂದಿನ ಯುವಪೀಳಿಗೆ ಮಾತ್ರವಲ್ಲದೇ ಆಬಾಲವೃದ್ಧರೆಲ್ಲರನ್ನೂ ಆವರಿಸಿಬಿಟ್ಟಿದೆ. ತಮ್ಮದೂ ಏನಾದರೊಂದು ಚಟುವಟಿಕೆ ಇರಲಿ ಎನ್ನುವ ಕಾರಣಕ್ಕೆ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅವುಗಳಲ್ಲಿ ಕೆಲವೊಂದು ಹುಚ್ಚುಚ್ಚಾಗಿರಲಿ, ಹೇಗೆ ಇರಲಿ ವೈರಲ್ ಆಗಿಬಿಡುತ್ತವೆ. ಕೆಲವೊಮ್ಮೆ ಪುಟಾಣಿಗಳು ಮಾಡುವ ರೀಲ್ಸ್ಗಳು ಜನರ ಮನಸ್ಸನ್ನು ಗೆಲ್ಲುತ್ತವೆ.
ನೋರಾ ಫತೇಹಿ ಅವರ ಹಿಟ್ ಹಾಡು ಓ ಸಾಕಿ ಸಾಕಿಗೆ ಪುಟ್ಟ ಹುಡುಗಿಯೊಬ್ಬಳು ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತಾನೇ ಹಾಡನ್ನು ಹಾಡಿಕೊಂಡು ತಾನೇ ವಿಡಿಯೋ ಮಾಡಿ, ತಾನೇ ಡಾನ್ಸ್ ಮಾಡುತ್ತಿರುವ ಈ ಬಾಲಕಿಯನ್ನು ನೋಡಿದರೆ ಎಂಥವರಿಗೂ ಖುಷಿಯಾಗುವಂತಿದೆ.
“ಚಲಿಯೇ ಫ್ರೆಂಡ್ಸ್, ಡ್ಯಾನ್ಸ್ ಕರ್ತೇ ಹೈ!” (ಬನ್ನಿ ಸ್ನೇಹಿತರೇ ಡಾನ್ಸ್ ಮಾಡುವಾ) ಎಂದು ಹೇಳುವ ಮೂಲಕ ಬಾಲಕಿ ಖುದ್ದು ಚಿತ್ರೀಕರಣವನ್ನು ಪ್ರಾರಂಭಿಸುತ್ತಾಳೆ. ನಂತರ ಅವಳು “ಮೇನ್ ತೇರಿ ಆಂಖೋಂ ಕಾ ಸಾಹಿಲ್, ಮೈನ್ ತೇರೆ ದಿಲ್ ಕೆ ಹೈ ಕಾಬಿಲ್, ತು ಮುಸಾಫಿರ್ ಮೈನ್ ತೇರಿ ಮಂಜಿಲ್…..” ಎಂಬ ಸಾಹಿತ್ಯವನ್ನು ಹಾಡಲು ಪ್ರಾರಂಭಿಸುತ್ತಾಳೆ.
ನಂತರ ಡಾನ್ಸ್ ಮಾಡಲು ತಿರುಗಲು ಪ್ರಯತ್ನಿಸುತ್ತಿರುವಾಗ, ಹುಡುಗಿ ತನ್ನ ಸಮತೋಲನವನ್ನು ಕಳೆದುಕೊಂಡು ಬೀಳುತ್ತಾಳೆ, ಇವೆಲ್ಲವೂ ಈ ರೀಲ್ಸ್ ಭಾಗವಾಗಿದ್ದು, ತಮಾಷೆ ಎನಿಸುವಂತಿದೆ. ಈಕೆಯ ನಟನೆಗೆ ನೆಟ್ಟಿಗರು ಪ್ರಶಂಸೆ ಮಾಡುತ್ತಿದ್ದಾರೆ. ಲೈಕ್ಸ್ಗಳ ಸುರಿಮಳೆಯಾಗುತ್ತಿದೆ.