ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೆಲ ವಿಡಿಯೋಗಳು ನಿಜಕ್ಕೂ ದಂಗಾಗುವ ಹಾಗೆ ಮಾಡುತ್ತೆ. ಇತ್ತೀಚೆಗೆ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗುವೊಂದು ಕಾರ್ ಹಿಂದಿನ ಡೋರ್ ಕಿಟಕಿಯಿಂದ ಜಾರಿ ಬೀಳುತ್ತೆ. ಕಾರ್ ಒಳಗೆ ಇದ್ದವರಿಗೆ ಅದು ಗೊತ್ತೇ ಆಗುವುದಿಲ್ಲ. ಅವರು ತಮ್ಮ ಪಾಡಿಗೆ ತಾವು ಮುಂದೆ ಹೊರಟು ಹೋಗಿ ಬಿಡುತ್ತಾರೆ.
ಚೀನಾದ ಶಾಂಘೈನ ನಿಂಗ್ಬೋ ನಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸಿಗ್ನಲ್ ಒಂದರಲ್ಲಿ ನಿಂತಿರುವಾಗ ಈ ಅವಘಡ ನಡೆದಿದೆ. ಈ ವಿಡಿಯೋ ನೋಡಿದವರೆಲ್ಲ ಶಾಕ್ ಆಗಿದ್ದಾರೆ. ಕಾರಿನೊಳಗಿದ್ದ ಪಾಲಕರ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮಕ್ಕಳನ್ನ ಹೆತ್ತ ಮಾತ್ರಕ್ಕೆ ಒಳ್ಳೆಯ ಅಪ್ಪ – ಅಮ್ಮ ಆಗುವುದಿಲ್ಲ. ಮಕ್ಕಳನ್ನ ಅಷ್ಟೇ ಜೋಪಾನ ಮಾಡಿ ನೋಡಿಕೊಳ್ಳುವುದು ಪಾಲಕರ ಕರ್ತವ್ಯವಾಗಿದೆ ಎಂದು ನೆಟ್ಟಿಗರು ಹೇಳ್ತಿದ್ಧಾರೆ.
ಕಾರಿನಿಂದ ಮಗು ಬಿದ್ದರೂ, ಕಾರಿನೊಳಗೆ ಇದ್ದ ಪಾಲಕರು ಗಮನಿಸದೇ ತಮ್ಮ ಪಾಡಿಗೆ ತಾವು ಹೊರಟು ಹೋಗಿ ಬಿಡುತ್ತಾರೆ. ಕಾರು ಹೊರಟು ಹೋದ ಮೇಲೆ, ಅಲ್ಲಿಯೇ ಇದ್ದ ಉಳಿದ ವಾಹನ ಸವಾರರು, ರಸ್ತೆ ಮೇಲೆ ಬಿದ್ದ ಮಗುವನ್ನ ಎತ್ತಿಕೊಂಡು ಹೋಗಿ ಸಮಾಧಾನ ಮಾಡುತ್ತಾರೆ. ಪಕ್ಕದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನ ಕೊಡಿಸಿ, ಮಗುವಿನ ಪಾಲಕರಿಗೂ ವಿಷಯ ಮುಟ್ಟಿಸುತ್ತಾರೆ.
ಟ್ವಿಟರ್ನಲ್ಲಿ ಹಂಚಿಕೊಂಡಿರೋ ಈ ವಿಡಿಯೋಗೆ ಹೈಟ್ಸ್ ಆಫ್ ಕೇರ್ಲೆಸ್ ಪೇರೆಂಟ್ಸ್ ಅಂತ ಶೀರ್ಷಿಕೆ ಕೊಡಲಾಗಿದೆ. ಅಂದರೆ ಇದು ಪಾಲಕರ ನಿರ್ಲಕ್ಷ್ಯದ ಪರಮಾವಧಿ. ನಿಜಕ್ಕೂ ಪಾಲಕರು ತಮ್ಮ ಮಕ್ಕಳತ್ತ ಗಮಹರಿಸದಿರುವುದು ವಿಪರ್ಯಾಸ. ಇದು ಕೇವಲ ಈ ಪಾಲಕರ ಕಥೆ ಅಲ್ಲ. ಇಂದಿನ ಅನೇಕ ಪಾಲಕರ ಗೋಳು ಕೂಡಾ ಇದೇ ಆಗಿದೆ.