ತಾವಿಷ್ಟ ಪಟ್ಟಿದ್ದು ಕೊಟ್ಟಿಲ್ಲ ಎಂದರೆ ಕೆಲವು ಮಕ್ಕಳು ರಂಪ-ರಾದ್ದಾಂತ ಮಾಡುತ್ತಾರೆ. ಅಂಗಡಿಗಳಿಗೆ ಹೋದಾಗ ತನಗೆ ಅದು ಬೇಕೆ ಬೇಕು ಅಂತಾ ಹಠ ಹಿಡಿಯುತ್ತಾರೆ. ಕೊಡಿಸದಿದ್ದಲ್ಲಿ ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ. ಹೀಗೆಯೇ ಬಾಲಕನೊಬ್ಬ ಬರ್ಗರ್ ಕೊಡದ್ದಕ್ಕೆ ಏನು ಮಾಡಿದ್ದಾನೆ ಗೊತ್ತಾ..?
ಚಿಕ್ಕ ಬಾಲಕನೊಬ್ಬ ಬರ್ಗರ್ ಗಾಗಿ ಬೇಡಿಕೆಯಿಟ್ಟಿದ್ದಾನೆ. ಆದರೆ ಮನೆಯವರು ಬರ್ಗರ್ ನೀಡದ್ದಕ್ಕೆ ತನ್ನ ಹರಿತವಾದ ಮಾತಿನ ಬಾಣ ಎಸೆದಿದ್ದಾನೆ. ಈ ಮೂಲಕ ತನ್ನ ಕೋಪವನ್ನು ಹೊರಹಾಕಿದ್ದಾನೆ. ಹುಡುಗನು ತನ್ನ ಕೋಪವನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಯುವತಿ ಜತೆಗೆ ತೋರಿಸಿಕೊಂಡಿದ್ದಾನೆ. ಬರ್ಗರ್ ನೀಡದಿರುವ ಬಗ್ಗೆ ಯುವತಿಗೆ ಬೈದದ್ದು ಮಾತ್ರವಲ್ಲದೆ ಮುಖತಿರುಗಿಸಿ ಹೊರಟು ಹೋಗುತ್ತಾನೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಬಾಲಕನ ಕೋಪಕ್ಕೆ ಅಯ್ಯೋ ಪಾಪ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ. ದಯವಿಟ್ಟು ಪುಟ್ಟ ಬಾಲಕನಿಗೆ ಬರ್ಗರ್ ನೀಡಿ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.
https://twitter.com/MFuturewala/status/1417895323414892549?ref_src=twsrc%5Etfw%7Ctwcamp%5Etweetembed%7Ctwterm%5E1417895323414892549%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-little-boy-throws-tantrum-for-not-getting-a-burger%2F789061