
ಪುಟ್ಟ ಮಕ್ಕಳು ಸಿಂಹದ ಬೊಂಬೆಯೊಂದಿಗೆ ಆಟವಾಡೋದನ್ನ ನೀವು ನೋಡಿದ್ದೀರ. ಆದರೆ ನಿಜವಾದ ಸಿಂಹದ ಜೊತೆ ಆಡುವುದನ್ನ ನೋಡಿದ್ದೀರಾ? ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನೊಬ್ಬ ಸಿಂಹದ ಹತ್ತಿರ ಕುಳಿತು ಆಟವಾಡುತ್ತಿರುವ ಆಘಾತಕಾರಿ ವಿಡಿಯೋ ಅದು.
ಚಿಕ್ಕ ಹುಡುಗ ಎರಡು ಸಿಂಹಗಳೊಂದಿಗೆ ಮುದ್ದಾಡುತ್ತಾ ಆಟವಾಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಹುಡುಗನು ಸಿಂಹದ ಬಾಯಿಯೊಳಗೆ ತನ್ನ ಕೈಗಳನ್ನು ಹಾಕುತ್ತಾನೆ. ಬಾಲಕ ಸಿಂಹಗಳ ಬೆನ್ನ ಮೇಲೆ ಬಡಿದರೂ ಎರಡೂ ಸಿಂಹಗಳು ಶಾಂತವಾಗೇ ಇರುತ್ತವೆ.
ಕಳೆದ ತಿಂಗಳು ನವೆಂಬರ್ 16 ರಂದು ಅಪ್ ಲೋಡ್ ಆಗಿರುವ ಪೋಸ್ಟ್ ಗೆ ಕೆಲವರು ವಿಡಿಯೋವನ್ನು ಮುದ್ದು ಎಂದು ಕರೆದರೆ, ಇನ್ನು ಕೆಲವರು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಇದು ಎಷ್ಟು ಮೂರ್ಖ ಮತ್ತು ಬೇಜವಾಬ್ದಾರಿ ಎಂದಿದ್ದಾರೆ.