ನಾಯಿಮರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ..? ಹೆಚ್ಚಿನ ಮಕ್ಕಳಿಗೆ ನಾಯಿಮರಿಗಳೆಂದ್ರೆ ಪಂಚಪ್ರಾಣ. ಅದೆಷ್ಟೋ ಮಂದಿ ಮಕ್ಕಳು ಬೀದಿಯ ನಾಯಿಮರಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಪೋಷಕರಿಂದ ಪೆಟ್ಟು ತಿಂದವರಿರಬಹುದು.
ಆದರೆ, ತಮಗೆ ಉಡುಗೊರೆಯಾಗಿ ನಾಯಿಮರಿಯನ್ನು ಕೊಟ್ಟರೆ ಅವರ ಪ್ರತಿಕ್ರಿಯೆ ಹೇಗಿರಬಹುದು..? ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಇದೀಗ ವೈರಲ್ ಆಗಿದೆ.
ಹೌದು, ನಿಮಗೇನಾದ್ರೂ ಬಹಳ ಅದ್ಭುತವಾದ ಅಥವಾ ಇಷ್ಟವಾದ ಉಡುಗೊರೆ ಸಿಕ್ರೆ ಖಂಡಿತಾ ಕಣ್ಣಲ್ಲಿ ನೀರು ಬರುತ್ತದೆ ಅಲ್ಲವೇ..? ಹಾಗೆಯೇ ಇಲ್ಲೊಬ್ಬ ಬಾಲಕನಿಗೆ ಆಶ್ಚರ್ಯಕರವಾಗಿ ನಾಯಿಮರಿಯೊಂದು ಸಿಕ್ಕಾಗ ಆತನ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನಗೆದ್ದಿದೆ.
ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ
ಬಾಲಕನೊಬ್ಬ ಮಾಸ್ಕ್ ಹಾಕಿಕೊಂಡು ತನ್ನ ತಾಯಿಯ ಎದುರಿಗೆ ನಿಂತಿದ್ದಾನೆ. ಈ ವೇಳೆ ಆತನ ತಾಯಿ ಮಾಸ್ಕ್ ತೆಗೆಯುವಂತೆ ಸೂಚಿಸಿದ್ದಾಳೆ. ನಂತರ ಆಕೆ ಟವೆಲ್ ನಲ್ಲಿ ಸುತ್ತಿದ ಮುದ್ದಾದ ನಾಯಿಮರಿಯನ್ನು ಬಾಲಕನಿಗೆ ಉಡುಗೊರೆಯಾಗಿ ನೀಡಿದ್ದಾಳೆ. ಒಮ್ಮೆಲೆ ಆತನಿಗೆ ಏನಾಗುತ್ತಿದೆ ಅಂತಾ ಗೊತ್ತಾಗಿಲ್ಲ. ಅವನಿಗೆ ನಾಯಿಮರಿ ಎಂದು ಗೊತ್ತಾದ ಕೂಡಲೇ ಕಣ್ಣೀರನ್ನು ತಡೆಯಲು ಸಾಧ್ಯವಾಗಿಲ್ಲ. ಅವನು ನಾಯಿಮರಿಯನ್ನು ಹಿಡಿದುಕೊಂಡು ತಾಯಿಯನ್ನು ತಬ್ಬಿದ್ದಾನೆ. ಅಲ್ಲದೆ ನಾಯಿಮರಿ ಕೊಟ್ಟಿದ್ದಕ್ಕೆ ಆನಂದಭಾಷ್ಪ ಸುರಿಸುತ್ತಾ ತಾಯಿಗೆ ಧನ್ಯವಾದ ಹೇಳಿದ್ದಾನೆ.
ಈ ವಿಡಿಯೋವನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಹಂಚಿಕೊಳ್ಳಲಾಗಿದ್ದು ಭಾರಿ ವೈರಲ್ ಆಗಿದೆ. ಇದನ್ನು 43,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.
https://twitter.com/Jess_asli/status/1455265321816924162?ref_src=twsrc%5Etfw%7Ctwcamp%5Etweetembed%7Ctwterm%5E1455265321816924162%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-little-boy-gets-puppy-as-gift-his-reaction-is-precious-watch%2F829298