ತನ್ನ ಪತ್ನಿಯ ಮೇಲೆ ಯಾರಾದರೂ ಕಣ್ಣು ಹಾಕಿದರೆ ಅವರ ವಿರುದ್ಧ ಪತಿ ತಿರುಗಿ ಬೀಳುತ್ತಾನೆ. ಇದು ಕೇವಲ ಮಾನವನಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಸಿಂಹಗಳು ಬಹುಪತ್ನಿತ್ವವನ್ನು ಪ್ರತಿಪಾದಿಸುತ್ತವೆ. ಆದರೂ, ತನ್ನ ಸಂಗಾತಿಯ ಜೊತೆಗೆ ಅಫೇರ್ ಇಟ್ಟುಕೊಳ್ಳಲು ಮತ್ತೊಂದು ಗಂಡು ಸಿಂಹ ಪ್ರಯತ್ನಪಟ್ಟರೆ ಅದರ ವಿರುದ್ಧ ಸಿಂಹ ಸೆಣಸಾಡುವುದನ್ನು ಕಾಣುತ್ತೇವೆ.
ಇಂತಹ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ‘theglobalanimalsworld’ ಪೇಜ್ ನ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಿಂಹಿಣಿಗಾಗಿ ಎರಡು ಸಿಂಹಗಳು ಹೋರಾಟ ಮಾಡುವುದನ್ನು ಕಾಣಬಹುದಾಗಿದೆ. ಸಿಂಹವೊಂದು ತನ್ನ ಸಂಗಾತಿ ಸಿಂಹಿಣಿಯ ಜೊತೆ ವಿಹರಿಸುವ ಸಂದರ್ಭದಲ್ಲಿ ಮತ್ತೊಂದು ಸಿಂಹ ಎಂಟ್ರಿ ಕೊಟ್ಟು, ಸಿಂಹಿಣಿಯ ಜೊತೆಗೆ ಸರಸವಾಡಲು ಪ್ರಯತ್ನ ನಡೆಸುತ್ತದೆ.
ಖಾತೆಗೆ 2 ಸಾವಿರ ರೂ. ಜಮಾ: ರೈತರಿಗೆ ಕೇಂದ್ರದಿಂದ ಮತ್ತೊಮ್ಮೆ ಗುಡ್ ನ್ಯೂಸ್
ಆದರೆ, ಮೊದಲ ಸಿಂಹ ತನ್ನ ಸಂಗಾತಿಯನ್ನು ಬೇರೊಂದು ಸಿಂಹದ ಜೊತೆ ಹಂಚಿಕೊಳ್ಳಲು ಇಷ್ಟಪಡದೇ ಸರಸಕ್ಕೆ ಪ್ರಯತ್ನಪಡುತ್ತಿದ್ದ ಸಿಂಹದ ಮೇಲೆ ಎರಗುತ್ತದೆ. ಎರಡನೇ ಸಿಂಹದ ಕತ್ತಿಗೆ ಕಚ್ಚುತ್ತಾ ಅದನ್ನು ಕೆಳಗೆ ಬೀಳಿಸುತ್ತದೆ. ಈ ವಿಡಿಯೋವನ್ನು 40.8k ಬಾರಿ ವೀಕ್ಷಣೆ ಮಾಡಲಾಗಿದ್ದು, 716 ಲೈಕ್ ಗಳನ್ನು ನೀಡಲಾಗಿದೆ.